

ಶಿಮ್ಲಾ: ನಿರಂತರವಾಗಿ 4 ಬಾರಿ ಶಿಮ್ಲಾದಲ್ಲಿ ವಿಧಾನಸಭೆಗೆ ಸ್ಪರ್ಧಿಸಿದ್ದ ಸುರೇಶ್ ಭಾರದ್ವಾಜ್ ಬಿಟ್ಟು, ಸಾಮಾನ್ಯ ಚಾ ಅಂಗಡಿ ಮಾಲೀಕನಿಗೆ ಬಿಜೆಪಿ ಸೀಟನ್ನು ನೀಡಿದೆ!
ಚಹಾ ಅಂಗಡಿ ಹಾಕಿಕೊಂಡಿರುವ ಸಂಜಯ್ ಸೂದ್ಗೆ ಶಿಮ್ಲಾದಿಂದ ಸ್ಪರ್ಧಿಸಲು ಬಿಜೆಪಿ ಪಕ್ಷ ಟಿಕೆಟ್ ನೀಡಿದೆ. ಸುರೇಶ್ ಭಾರದ್ವಾಜ್ ವಿಧಾನಸಭೆಗೆ ಕಸುಂಪ್ತಿಯಿಂದ ಸ್ಫರ್ಧಿಸಲಿದ್ದಾರೆ. ಈ ಸಂದರ್ಭ ಮಾತನಾಡಿದ ಸೂದ್ , 'ನಾನು ಬಡತನದ ಹಿನ್ನೆಲೆಯಿಂದ ಬಂದವನು. 1991ರಿಂದ ಚಹಾ ಅಂಗಡಿ ನಡೆಸಿಕೊಂಡು ಬಂದಿದ್ದೇನೆ. ಅದಕ್ಕೂ ಹಿಂದೆ ಬಸ್ಸ್ಟ್ಯಾಂಡ್ನಲ್ಲಿ ದಿನಪತ್ರಿಕೆ ಮಾರುತ್ತಿದ್ದೆ' ಎಂದು ತಮ್ಮ ಹಿನ್ನೆಲೆಯನ್ನು ವಿವರಿಸಿದ್ದಾರೆ.
'ನನ್ನನ್ನು ಶಿಮ್ಲಾದಲ್ಲಿ ಸ್ಪರ್ಧೆಗೆ ಇಳಿಸಿದ ಬಿಜೆಪಿಗೆ ನಾನು ಆಭಾರಿಯಾಗಿದ್ದೇನೆ. ಈ ಸುದ್ದಿ ಕೇಳಿ ನನಗೆ ತುಂಬಾ ಖುಷಿಯಾಗಿದೆ. ಇದು ನನ್ನಂತಹ ಸಾಧಾರಣ ಕಾರ್ಯಕರ್ತನಿಗೆ ಸಿಕ್ಕಿರುವ ದೊಡ್ಡ ಗೌರವ' ಎಂದು ಟಿಕಟ್ ಸಿಕ್ಕಿರುವ ಬಗ್ಗೆ ಅಭ್ಯರ್ಥಿ ಸಂಜಯ್ ಸೂದ್ ಸಂತಸವನ್ನು ವ್ಯಕ್ತಪಡಿಸಿದರು.