ಚೈತ್ರ ನವರಾತ್ರಿ ಸಮಯದಲ್ಲಿ ದುರ್ಗಾ ದೇವಿಯನ್ನು ಒಲಿಸಿಕೊಳ್ಳುವುದು ಹೇಗೆ? ಯಾವ ದಿಕ್ಕಿನಲ್ಲಿ ದೀಪ ಬೆಳಗಿಸಿದರೆ ಒಳಿತಾಗುತ್ತೆ; Festival

durga
Published on

Festival | ವರ್ಷದ ಬಹುತೇಕ ಹಬ್ಬಗಳಲ್ಲಿ ಚೈತ್ರ ನವರಾತ್ರಿ ಹಬ್ಬ ಕೂಡ ಒಂದಾಗಿದೆ. ಇದೇ ಮಾರ್ಚ್​ (30) ರಿಂದ ನವರಾತ್ರಿ ಪೂಜೆ ಪ್ರಾರಂಭವಾಗಲಿದೆ. ಭಕ್ತರು ಒಂಬತ್ತು ದಿನಗಳವರೆಗೆ ದುರ್ಗಾ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸುತ್ತಾರೆ. ಈ ವರ್ಷದ ನವರಾತ್ರಿಯ ಸಮಯದಲ್ಲಿ ನೀವು ದುರ್ಗಾ ದೇವಿಗೆ ದೀಪವನ್ನು ಬೆಳಗಿಸಲು ಯೋಜಿಸುತ್ತಿದ್ದರೆ, ಈ ನಿಯಮಗಳನ್ನು ಅನುಸರಿಸಿ.

ಹಿಂದೂ ಕ್ಯಾಲೆಂಡರ್ ಪ್ರಕಾರ ನವರಾತ್ರಿಯು ಚೈತ್ರ ಸೂರ್ಯ ಮಾಸದ ಮೊದಲ ದಿನದಂದು ಆರಂಭಗೊಂಡು ಒಂಬತ್ತನೇ ದಿನ ಕೊನೆಗೊಳ್ಳುತ್ತದೆ. ಈ ವರ್ಷ ಚೈತ್ರ ನವರಾತ್ರಿಯನ್ನು 9 ದಿನಗಳ ಬದಲಾಗಿ 8 ದಿನಗಳ ಕಾಲ ಆಚರಿಸಲಾಗುತ್ತದೆ. ಇದು ಮಾರ್ಚ್ 30 ರಿಂದ ಪ್ರಾರಂಭವಾಗಿ ಏಪ್ರಿಲ್ 6 ರಂದು ಕೊನೆಗೊಳ್ಳಲಿದೆ. ಈ ಸಮಯದಲ್ಲಿ, ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಪೂಜಿಸುವುದು ಮತ್ತು ಕಲಶವನ್ನು ಸ್ಥಾಪಿಸುವುದು ವಿಶೇಷ.

ಅನೇಕ ಜನರು ಒಂಬತ್ತು ದಿನಗಳ ಕಾಲ ದೇವರಿಗಾಗಿ ಉಪವಾಸ ಮಾಡಿ, ಕಲಶವನ್ನು ಸ್ಥಾಪಿಸುವುದರ ಜೊತೆಗೆ ದಿವ್ಯ ಜ್ಯೋತಿಯನ್ನು ಬೆಳಗಿಸುತ್ತಾರೆ. ಇದು ಬಹಳ ಪವಿತ್ರವಾದ ಜ್ಯೋತಿಯಾಗಿದ್ದು, ನವರಾತ್ರಿ ಮುಗಿಯುವವರೆಗೂ ಈ ದೀಪ ಉರಿಯುತ್ತಲೇ ಇರುತ್ತದೆ. ಈ ವರ್ಷ ನವರಾತ್ರಿಯ ಎಲ್ಲಾ ದಿನಗಳಂದು ನೀವು ನಿರಂತರವಾಗಿ ದೀಪ ಬೆಳಗಿಸಬೇಕೆಂದಿದ್ದರೆ ಈ ಕೆಳಕಂಡಂತಿರುವ ನಿಯಮ ಪಾಲಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ನೆಲೆಸುತ್ತದೆ ಮತ್ತು ಅಕಾಲಿಕ ಮರಣದಿಂದ ರಕ್ಷಣೆ ದೊರೆಯುತ್ತದೆ ಎಂದು ಹೇಳಲಾಗಿದೆ.

Deepavali

ಇದನ್ನೂ ಓದಿ : ಯುಗಾದಿಯಂದು ಸಾಲ ಕೊಡಬೇಡಿ, ಜಗಳ ಮಾಡಬೇಡಿ ಈ ಹಬ್ಬದ ದಿನ ಏನು ಮಾಡಬೇಕು ಗೊತ್ತಾ? ಶಾಸ್ತ್ರ ಹಾಗೂ ಪುರಾಣಗಳ ಪ್ರಕಾರ, ಸಾಮಾನ್ಯವಾಗಿ ಪೂಜೆಯ ಸಮಯದಲ್ಲಿ ಎರಡು ರೀತಿಯ ದೀಪಗಳನ್ನು ಬೆಳಗಿಸಲಾಗುತ್ತದೆ. ಒಂದು ಕರ್ಮ ದೀಪವಾಗಿದ್ದು ಇದನ್ನು ಪೂಜೆಯ ಸಮಯದಲ್ಲಿ ಮಾತ್ರ ಬೆಳಗಿಸಲಾಗುತ್ತದೆ ಮತ್ತು ಇನ್ನೊಂದು ಅಖಂಡ ದೀಪವಾಗಿದ್ದು, ಇದನ್ನು ಅಖಂಡ ಜ್ಯೋತಿ ಎಂದೂ ಕರೆಯುತ್ತಾರೆ. ಉಪವಾಸ, ಹಬ್ಬಗಳು ಮತ್ತು ಶುಭ ಕಾರ್ಯಗಳ ಸಂದರ್ಭದಲ್ಲಿ ಈ ದೀಪವನ್ನು ಬೆಳಗಿಸಲಾಗುತ್ತದೆ.

ಪೂರ್ವಕ್ಕೆ ಜ್ಯೋತಿ ಬೆಳಗಿಸುವುದು :

ನೀವು ಪೂರ್ವದ ಕಡೆಗಾದಂತೆ ನಿರಂತರವಾಗಿ ಜ್ಯೋತಿಯನ್ನು (ದೀಪ) ಬೆಳಗಿಸಿದರೆ, ದುರ್ಗಾ ದೇವಿಯೊಂದಿಗೆ ಇತರ ದೇವತೆಗಳು ಸಹ ಸಂತೋಷಪಡುತ್ತಾರೆ. ಈ ದಿಕ್ಕಿನಲ್ಲಿ ದೀಪ ಹಚ್ಚುವುದರಿಂದ ಮನೆಗೆ ಸಂತೋಷ, ಶಾಂತಿ ಮತ್ತು ಸಂಪತ್ತು ಬರುತ್ತದೆ ಎನ್ನಲಾಗಿದೆ.

ಪಶ್ಚಿಮಕ್ಕೆ ಜ್ಯೋತಿ ಬೆಳಗಿಸುವುದು

ನಿರಂತರವಾಗಿ ಜ್ಯೋತಿಯನ್ನು ಪಶ್ಚಿಮಕ್ಕೆ ಮುಖ ಮಾಡಿ ಇಡುವುದರಿಂದ ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಂತೋಷ, ಸಮೃದ್ಧಿ ಮತ್ತು ತೃಪ್ತಿಯನ್ನು ಪಡೆಯುತ್ತೀರಿ.

ದಕ್ಷಿಣಕ್ಕೆ ಜ್ಯೋತಿ ಬೆಳಗಿಸುವುದು

ದೇವಿ ಭಗವತಿ ಪುರಾಣದ ಪ್ರಕಾರ, ಜ್ಯೋತಿ ದಕ್ಷಿಣ ದಿಕ್ಕಿನಲ್ಲಿ ಎಂದಿಗೂ ಉರಿಯುತ್ತಲೇ ಇರಬಾರದು, ಏಕೆಂದರೆ ಈ ದಿಕ್ಕು ಯಮರಾಜನಿಗೆ ಸೇರಿದ್ದು ಎಂದು ಪರಿಗಣಿಸಲಾಗಿದೆ. ಅಂತಹ ಸಂದರ್ಭದಲ್ಲಿ, ಈ ದಿಕ್ಕಿನಲ್ಲಿ ನಿರಂತರ ದೀಪ ಉರಿಸುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ, ಅನಾರೋಗ್ಯ ಮತ್ತು ಸಾವು ಬರುವ ಸಾಧ್ಯತೆಯೂ ಇರುತ್ತದೆ ಎಂದು ಹೇಳಿಲಾಗಿದೆ.

ಉತ್ತರದ ಕಡೆ ಜ್ಯೋತಿ ಬೆಳಗಿಸುವುದು

ಉತ್ತರ ದಿಕ್ಕನ್ನು ಸಹ ಬಹಳ ಮಂಗಳಕರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಭಗವಾನ್ ಕುಬೇರ ನೆಲೆಸಿದ್ದಾನೆ. ಹಾಗಾಗಿ ಈ ದಿಕ್ಕಿನಲ್ಲಿ ನಿರಂತರವಾಗಿ ದೀಪ ಬೆಳಗಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಮತ್ತು ಅಕಾಲಿಕ ಮರಣದ ಭಯವನ್ನು ತೆಗೆದುಹಾಕುತ್ತದೆ.

ಆಗ್ನೇಯ ದಿಕ್ಕಿಗೆ ಜ್ಯೋತಿ ಬೆಳಗಿಸುವುದು

(ಏಜೆನ್ಸೀಸ್​)

ದೇವಿ ಭಗವತಿ ಪುರಾಣದ ಪ್ರಕಾರ, ಆಗ್ನೇಯ ದಿಕ್ಕಿನಲ್ಲಿ ದೀಪ ಬೆಳಗಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಭಾಗದಲ್ಲಿ ನಿರಂತರ ದೀಪ ಬೆಳಗಿಸುವುದರಿಂದ ಸಂತೋಷ, ಮತ್ತು ಸಮೃದ್ಧಿ ಬರುತ್ತದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net