

ಹೈದ್ರಾಬಾದ್: ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ( Chai-Sam Divorce ) ಕೆಟಿಆರ್ ( Ktr ) ಕಾರಣ ( Samantha Breakup Reason ) ಎಂದು ತೆಲಂಗಾಣ ಸಚಿವೆ ಕೊಂಟ ಸುರೇಖಾ ಆರೋಪ ಮಾಡಿದ್ದಾರೆ. ಈ ಸುದ್ದಿಯಾದ ಬೆನ್ನಲ್ಲೇ ಸಚಿವೆ ಕೊಂಡ ಸುರೇಖಾ ವಿರುದ್ಧ ಸಮಂತಾ, ನಾಗಚೈತನ್ಯ, ನಾಗಾರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡುವ ಮೂಲಕ ಬೇಸರ ಹೊರಹಾಕಿದ್ದಾರೆ.
ಇದೀಗ ನಾಗಾರ್ಜುನ್ ಅವರ ಪತ್ನಿ, ನಟಿ ಅಕ್ಕಿನೇನಿ ಅಮಲಾ ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆ. ಕೊಂಡ ಸುರೇಖಾ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕೆ ಅಕ್ಕಿನೇನಿ ಅಮಲಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಪುಘಾಟ್ನಲ್ಲಿ ಗಾಂಧಿ ಜಯಂತಿಯಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಅವರು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಕಾರ್ಯಾಧ್ಯಕ್ಷ ಹಾಗೂ ತೆಲಂಗಾಣ ಮಾಜಿ ಸಿಎಂ ಪುತ್ರ ಕೆಟಿಆರ್ ವಿರುದ್ಧ ಆಘಾತಕಾರಿ ಆರೋಪಗಳ ಮೂಲಕ ರಾಜಕೀಯ ಕಿಡಿ ಹೊತ್ತಿಸಿದರು.
ಬಾಪುಘಾಟ್ನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಟಾಲಿವುಡ್ ರಿಯಲ್ ಲೈಫ್ ಜೋಡಿ ನಾಗ ಚೈತನ್ಯ ಮತ್ತು ಸಮಂತಾ ತಮ್ಮ ವಿಚ್ಛೇದನಕ್ಕೆ ಕೆಟಿಆರ್ ಕಾರಣ ಎನ್ನಲಾಗುತ್ತಿದೆ ನಾನು ಇದನ್ನು ಬಹಿರಂಗವಾಗಿ ಹೇಳುತ್ತಿದ್ದೇನೆ. ಕೆಟಿಆರ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಹಲವು ಸಿನಿಮಾ ನಾಯಕಿಯರ ಜೀವನದೊಂದಿಗೆ ಆಟವಾಡಿದ್ದಾರೆ, ನಾಯಕಿಯರ ಫೋನ್ ಕದ್ದಾಲಿಕೆ ಮಾಡಿ ನಾಯಕಿಯರನ್ನು ಡ್ರಗ್ಸ್ ಚಟಕ್ಕೆ ಸಿಲುಕಿಸಿ ಅವರ ಜೀವನವನ್ನೇ ನಾಶ ಮಾಡಿದ್ದಾರೆ. ನಾಯಕಿಯರು ಬೇಗ ಮದುವೆಯಾಗದೇ ಇರಲು ಕಾರಣ ಕೆಟಿಆರ್. ಕೆಟಿಆರ್ ನಾಯಕಿಯರ ಜೀವನ ಹಾಳು ಮಾಡಿದ್ದು ಟಾಲಿವುಡ್ ನ ಹಿರಿಯರೆಲ್ಲರಿಗೂ ಗೊತ್ತು ಎಂದು ಸಾಲುಸಾಲು ಆರೋಪ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
‘ಎನ್ ಕನ್ವೆನ್ಷನ್ ಕಟ್ಟಡ ಒಡೆಯಬಾರದು ಎಂದರೆ ಸಮಂತಾಳನ್ನು ನನ್ನ ಬಳಿ ಕಳಿಸಿ ಎಂದು ನಾಗಾರ್ಜುನಗೆ ಕೆ.ಟಿ. ರಾಮ ರಾವ್ ಹೇಳಿದ್ದರು. ಕೆ.ಟಿ. ರಾಮ ರಾವ್ ಬಳಿ ಹೋಗು ಎಂದು ಸಮಂತಾಗೆ ನಾಗಾರ್ಜನ ಒತ್ತಾಯ ಮಾಡಿದರು. ಆದರೆ ಸಮಂತಾ ಒಪ್ಪಿಕೊಳ್ಳಲಿಲ್ಲ. ಒಪ್ಪದಿದ್ದರೆ ಮನೆ ಬಿಟ್ಟುಹೋಗು ಎಂದು ನಾಗಾರ್ಜುನ ಹೇಳಿದರು. ಅದಕ್ಕಾಗಿ ನಾಗ ಚೈತನ್ಯಗೆ ಸಮಂತಾ ಡಿವೋರ್ಸ್ ನೀಡಿದರು’ ಎಂದು ಕೊಂಡ ಸುರೇಖಾ ಹೇಳಿದ್ದಾರೆ.
ಕೊಂಡಾ ಸುರೇಖಾ ಅವರ ಹೇಳಿಕೆಯನ್ನು ನಾಗಾರ್ಜುನ, ಸಮಂತಾ ಮತ್ತು ನಾಗ ಚೈತನ್ಯ ಖಂಡಿಸಿದ್ದಾರೆ. ನಿಮ್ಮ ರಾಜಕೀಯಕ್ಕೆ ಅವರನ್ನು ಎಳೆದು ತರಬೇಡಿ. ಕೆಟಿಆರ್ ಕೂಡ ಖಾರವಾಗಿ ಪ್ರತಿಕ್ರಿಯಿಸಿ ಸುರೇಖಾ ವಿರುದ್ಧ ಆರೋಪ ಮಾಡಿದ್ದಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ನಾಗಾರ್ಜುನ್ ಪತ್ನಿ ಅಮಲಾ ಟ್ವೀಟ್ನಲ್ಲಿ ಏನಿದೆ?:
ರಾಜಕೀಯ ವಿವಾದಗಳಿಗೆ ನಮ್ಮನ್ನು ಎಳೆಯಬೇಡಿ.. ನನ್ನ ಪತಿಯ ಬಗ್ಗೆ ಆಧಾರ ರಹಿತ ಆರೋಪ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ..ಎಂದು ಅಮಲಾ ಕಟುವಾದ ಕಾಮೆಂಟ್ ಮಾಡಿದ್ದಾರೆ. ರಾಜಕಾರಣಿಗಳು ಕ್ರಿಮಿನಲ್ಗಳಂತೆ ನಡೆದುಕೊಂಡರೆ ಈ ದೇಶದ ಗತಿಯೇನು? ಸಚಿವ ಕೊಂಡಾ ಸುರೇಖಾ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಲು ರಾಹುಲ್ ಗಾಂಧಿ ಅವರೆ...ದಯವಿಟ್ಟು ನಿಮ್ಮ ರಾಜಕಾರಣಿಗಳನ್ನು ಸಂಯಮ ಮಾಡಿ ಮತ್ತು ನಿಮ್ಮ ಸಚಿವರು ನನ್ನ ಕುಟುಂಬಕ್ಕೆ ಕ್ಷಮೆಯಾಚಿಸುವುದರೊಂದಿಗೆ ಅವರ ವಿಷಕಾರಿ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡಿ ಈ ದೇಶದ ನಾಗರಿಕರನ್ನು ರಕ್ಷಿಸಿ... ಎಂದು ಅಕ್ಕಿನೇನಿ ಅಮಲಾ ಆಗ್ರಹಿಸಿದ್ದಾರೆ...
ಸಮಂತಾ ವಿಚ್ಛೇದನಕ್ಕೆ ಹಾಗೂ ಟಾಲಿವುಡ್ ನಿಂದ ಹಲವು ನಾಯಕಿಯರು ದೂರವಾಗಲು ನಾನೇ ಕಾರಣ ಎಂಬ ಸಚಿವೆ ಕೊಂಡಾ ಸುರೇಖಾ ಅವರ ಕಾಮೆಂಟ್ ಗೆ ಕೆಟಿಆರ್ ಪ್ರತಿಕ್ರಿಯಿಸಿದ್ದಾರೆ. ಆಕೆಯ ಇಮೇಜ್ ಗೆ ಧಕ್ಕೆ ತರಲು ಈ ರೀತಿ ಮಾಡಲಾಗಿದೆ ಎಂದು ಆಕೆಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಮಾಡಿರುವ ಸುರೇಖಾ ವಿರುದ್ಧ 24 ಗಂಟೆಯೊಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದರು.