

ಬೆಂಗಳೂರು ಸಿಇಟಿ ಪಠ್ಯಕ್ರಮ ಹೊರತಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ತಜ್ಞರ ಸಮಿತಿ ವರದಿಯ ಶಿಾರಸುಗಳನ್ನು ಅನುಷ್ಠಾನ ಮಾಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ. ಅದರಂತೆ ಕಾರ್ಯಪ್ರವೃತ್ತವಾಗಿರುವ ಕೆಇಎ, ಕೀ ಉತ್ತರ ಪ್ರಕಟಿಸಿದ್ದು ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಿದೆ.
ಉನ್ನತ ಶಿಕ್ಷಣ ಇಲಾಖೆಯ ಸಮಿತಿ ಶಿಾರಸಿನಂತೆ ಮೊದಲಿಗೆ 2023-24ರಲ್ಲಿ ಕೈಬಿಡಲಾದ ಪಠ್ಯಕ್ರಮಗಳಿಂದ ಜೀವಶಾಸದಲ್ಲಿ 11, ಭೌತಶಾಸ-9, ಗಣಿತ ಮತ್ತು ರಸಾಯನಶಾಸದಲ್ಲಿ ತಲಾ 15 ಸೇರಿ ಒಟ್ಟು 50 ಪ್ರಶ್ನೆಗಳು ಪಠ್ಯಕ್ರಮ ಹೊರತಾದ ಪ್ರಶ್ನೆಗಳಿವೆ ಎಂದು ಸಮಿತಿ ಹೇಳಿದೆ.
ಈ ಎಲ್ಲ ವಿಷಯಗಳ ತಾತ್ಕಾಲಿಕ ಸರಿ ಉತ್ತರಗಳನ್ನು ಕೆಇಎ ವೆಬ್‌ಸೈಟ್ ಠಿಠಿ://ಛಿ.ಚ್ಟ.್ಞಜ್ಚಿ.ಜ್ಞಿ ನಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ಮೇ 7ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಾಧಿಕಾರದ ಆನ್‌ಲೈನ್ ಪೋರ್ಟಲ್ ಮೂಲಕ ಮಾತ್ರವೇ ಏ.30ರ ಬೆಳಗ್ಗೆ
11ರಿಂದ ಮೇ 7ರ ಬೆಳಿಗ್ಗೆ 11 ಗಂಟೆಯವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಪಠ್ಯ ಹೊರತಾದ ಪ್ರಶ್ನೆಗಳನ್ನು ಕೀ ಉತ್ತರದ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕೆಇಎ ತಿಳಿಸಿದೆ.
ಇಎಕ್ಸ್ ಪ್ರಶ್ನೆಗಳು:
ಸಿಇಟಿ ಎಲ್ಲ ಪ್ರಶ್ನೆಗಳಿಗೂ ಕೀ ಉತ್ತರಗಳನ್ನು ಪ್ರಕಟಿಸಲಿದೆ. ಪಠ್ಯಕ್ರಮ ಹೊರತಾದ ಪ್ರಶ್ನೆಗಳಿಗೆ ಇಎಕ್ಸ್ ಎಂದು ನಮೂದಿಸಲಾಗಿರುತ್ತದೆ. ಇಎಕ್ಸ್ ಪ್ರಶ್ನೆಗಳನ್ನು ಹೊರತುಪಡಿಸಿ ಉಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಕೀ ಉತ್ತರಗಳನ್ನು ತಿಳಿಯಬಹುದು. ಇಎಕ್ಸ್ ಪ್ರಶ್ನೆಗಳು ಪಠ್ಯಕ್ರಮ ಹೊರತಾದ ಪ್ರಶ್ನೆಗಳೆಂದು ವಿದ್ಯಾರ್ಥಿಗಳು ತಿಳಿಯಬೇಕು. ಉಳಿದ ಪ್ರಶ್ನೆಗಳಿಗೆ ತಪ್ಪು ಕೀ ಉತ್ತರಗಳಲ್ಲಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬಹುದು.
ಮೌಲ್ಯಮಾಪನ ಆರಂಭ:
ಮೇ ಅಂತ್ಯದೊಳಗೆ ಲಿತಾಂಶ ಪ್ರಕಟಿಸಬೇಕಿರುವ ಹಿನ್ನೆಲೆಯಲ್ಲಿ ಮೌಲ್ಯಮಾಪನ ಕಾರ್ಯಕ್ಕೂ ಮಂಗಳವಾರ (ಏ.30) ಚಾಲನೆ ನೀಡಲಿದೆ. ಈಗಾಗಲೇ ಮೌಲ್ಯಮಾಪನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪಠ್ಯಕ್ರಮ ಹೊರತಾದ ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳಿಗೆ ಮೌಲ್ಯಮಾಪನ ಮಾಡಲಾಗುತ್ತದೆ. ಒಂದೆರಡು ದಿನಗಳಲ್ಲಿ ಮೌಲ್ಯಮಾಪನ ಕೂಡ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.