ಸಿಇಟಿ: ಭೌತಶಾಸಕ್ಕೆ ಒಂದು ಕೃಪಾಂಕ ಘೋಷಣೆ

kea
Published on

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನಡೆಸಿದ ಯುಜಿಸಿಇಟಿಯಲ್ಲಿ ಭೌತಶಾಸ ವಿಷಯದಲ್ಲಿ ಒಂದು ಕೃಪಾಂಕವನ್ನು ನೀಡುವುದಾಗಿ ಘೋಷಿಸಿದೆ. ಜತೆಗೆ, ಕೆಲ ಉತ್ತರಗಳಿಗೆ ಬದಲಾವಣೆ ಹಾಗೂ ಪರ್ಯಾಯ ಉತ್ತರಗಳನ್ನು ನೀಡಿದೆ.

ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗಾಗಿ ಪ್ರಾಧಿಕಾರವು ಏ.15ರಿಂದ 17ರವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಯ ಸರಿಯುತ್ತರಗಳನ್ನು ಏ.18ರಂದು ಬಿಡುಗಡೆ ಮಾಡಿ ಆಕ್ಷಪಣೆಗಳನ್ನು ಆಹ್ವಾನಿಸಿತ್ತು. ಅದರಂತೆ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಗಣಿಸಿ ಪರಿಷ್ಕೃತ ಸರಿಯುತ್ತರಗಳನ್ನು ಬಿಡುಗಡೆ ಮಾಡಿದೆ.

ಹೊಸ ಸರಿಯುತ್ತರಗಳ ಪ್ರಕಾರ ಭೌತಶಾಸ ವಿಷಯದಲ್ಲಿ ಒಂದು ಪ್ರಶ್ನೆಗೆ ಕೃಪಾಂಕ ನೀಡಿದೆ. ಜತೆಗೆ, ಒಂದು ಉತ್ತರವನ್ನು ಬದಲಾಯಿಸಿದೆ. ರಸಾಯನಶಾಸದಲ್ಲಿ ಎರಡು ಉತ್ತರಗಳಿಗೆ ಪರ್ಯಾಯ ಉತ್ತರಗಳನ್ನು ಸೂಚಿಸಲಾಗಿದೆ. ಜೀವಶಾಸ ಪತ್ರಿಕೆಯಲ್ಲಿ ಒಂದು ಪ್ರಶ್ನೆಗೆ ಪರ್ಯಾಯ ಉತ್ತರ ನೀಡಲಾಗಿದೆ. ಇನ್ನುಳಿದಂತೆ ಗಣಿತ ಪತ್ರಿಕೆಯ ಯಾವುದೇ ಉತ್ತರದಲ್ಲಿ ಬದಲಾವಣೆ ಇಲ್ಲವೆಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net