

ಬೆಂಗಳೂರು: ರಾಜ್ಯದಲ್ಲಿನ ಮಳೆ ಹಾಗೂ ಪ್ರವಾಹಬಾಧಿತ ಪ್ರದೇಶ ವಸ್ತುಸ್ಥಿತಿ ಅಧ್ಯಯನಕ್ಕಾಗಿ ಕೇಂದ್ರ ತಂಡ ಸೋಮವಾರ ಆಗಮಿಸಲಿದೆ. ವಿಚಾರ-ವಿನಿಮಯ, ಸ್ಥಳ ಸಮೀಕ್ಷೆ, ಮತ್ತೊಮ್ಮೆ ರಾಜ್ಯ ಸರ್ಕಾರದೊಂದಿಗೆ ರ್ಚಚಿಸಿ ಬುಧವಾರ ಸಂಜೆ ದೆಹಲಿಗೆ ಮರಳಲಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ನೇತೃತ್ವದ 6 ಸದಸ್ಯರ ತಂಡ ಸೆ.7ರಂದು ಮಧ್ಯಾಹ್ನ ಬೆಂಗಳೂರಿಗೆ ಬಂದಿಳಿಯಲಿದ್ದು, ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 5ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ವಿಚಾರ ವಿನಿಮಯ ನಡೆಸಲಿದೆ.
ತಲಾ ಇಬ್ಬರಂತೆ 3 ತಂಡಗಳಾಗಿ ವಿಭಜನೆಗೊಂಡು ಸ್ಥಳ ಸಮೀಕ್ಷೆಗೆ ತೆರಳಲಿದ್ದಾರೆ. ಕೆ.ವಿ.ಪ್ರತಾಪ್ ನೇತೃತ್ವದ ಮೊದಲ ತಂಡ ಸೆ.8ರ ಬೆಳಗ್ಗೆ 7.30ಕ್ಕೆ ಕೊಡಗು ಜಿಲ್ಲೆಗೆ ಪ್ರಯಾಣ ಬೆಳೆಸಲಿದೆ. ಎರಡನೇ ತಂಡ ಬೆಳಗಾವಿ ಹಾಗೂ ಧಾರವಾಡ, ಮೂರನೇ ತಂಡ ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಇವರಿಗೆ ರಾಜ್ಯದ ಅಧಿಕಾರಿಗಳು ಸಾಥ್ ನೀಡಲಿದ್ದಾರೆ. ಆಯಾ ಜಿಲ್ಲೆಗಳಲ್ಲಿ ಹಾನಿಯ ವಿವರಗಳನ್ನು ಜಿಲ್ಲಾಧಿಕಾರಿಗಳು ಒದಗಿಸಿದ ಬಳಿಕ ನಿಗದಿತ ಮಾರ್ಗದಲ್ಲಿ ಬೆಳೆ, ಜಮೀನು, ಮನೆಗಳು, ರಸ್ತೆ- ಸೇತುವೆ ಇನ್ನಿತರ ಬಾಧಿತ ಸ್ಥಳಗಳಿಗೆ ಕರೆದೊಯ್ದು ತೋರಿಸಲಿದೆ ಎಂದು ಮೂಲಗಳು ತಿಳಿಸಿವೆ.
ತಂಡದ ಸದಸ್ಯರು: = ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ =ಹಣಕಾಸು ಸಚಿವಾಲಯದ ನಿರ್ದೇಶಕ ಡಾ.ಭರತೆಂಡು ಕುಮಾರ್ ಸಿಂಗ್ =ಕೃಷಿ ಸಚಿವಾಲಯದ ನಿರ್ದೇಶಕ ಡಾ.ಮನೋಹರನ್ = ಜಲಶಕ್ತಿ ಸಚಿವಾಲಯದ ಎಸ್ಇ ಗುರುಪ್ರಸಾದ್ =ಭೂ ಸಾರಿಗೆ ಸಚಿವಾಲಯದ ಎಸ್ಇ ಸದಾನಂದಬಾಬು =ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ವಿ.ಪಿ.ರಾಜ್ವೇದಿ.
ಏನೇನು ಹಾನಿ?