

ದೆಹಲಿ: ಸರ್ಕಾರಿ ಉದ್ಯೋಗಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದ್ದು, ಕೇಂದ್ರ ಸರ್ಕಾರದ ಅಧಿಕಾರಿಗಳು 1.3 ಲಕ್ಷ ರೂ.ಮೌಲ್ಯದವರೆಗಿನ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಇತರ ರೀತಿಯ ಸಾಧನವನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: ಮಲಗಿದ್ದಲ್ಲೆ ಪ್ರಾಣ ಬಿಟ್ಟ ಮೂವರು ವಿದ್ಯಾರ್ಥಿಗಳು, ಮತ್ತೊಬ್ಬನ ಸ್ಥಿತಿ ಚಿಂತಾಜನಕ
ಅಷ್ಟೇ ಅಲ್ಲದೇ, ನಾಲ್ಕು ವರ್ಷಗಳ ನಂತರ ವೈಯಕ್ತಿಕ ಬಳಕೆಗಾಗಿ ಈ ಸಾಧನಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ಅನುಮತಿಯನ್ನು ಸಹ ನೀಡಲಾಗಿದ್ದು, ಹಣಕಾಸು ಸಚಿವಾಲಯವು ಈ ನಿಟ್ಟಿನಲ್ಲಿ ಹಲವಾರು ಮಾರ್ಗಸೂಚಿಗಳನ್ನು ನೀಡಿದೆ,ಇದರ ಪ್ರಕಾರ, ಅರ್ಹ ಅಧಿಕಾರಿಗಳು ಅಧಿಕೃತ ಕೆಲಸಕ್ಕಾಗಿ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಫ್ಯಾಬ್ಲೆಟ್, ನೋಟ್‌ಬುಕ್, ನೋಟ್‌ಪ್ಯಾಡ್, ಅಲ್ಟ್ರಾ-ಬುಕ್, ನೆಟ್-ಬುಕ್ ಅಥವಾ ಅಂತಹ ಮೌಲ್ಯದ ಇತರ ಉಪಕರಣಗಳನ್ನು ತೆಗೆದುಕೊಳ್ಳಬಹುದಾಗಿದೆ.
ಮಾರ್ಗಸೂಚಿಗಳ ಪ್ರಕಾರ, ಕೇಂದ್ರ ಸರ್ಕಾರದ ಉಪ ಕಾರ್ಯದರ್ಶಿ ಮತ್ತು ಮೇಲಿನ ಹಂತದ ಎಲ್ಲಾ ಅಧಿಕಾರಿಗಳು ಅಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಪಡೆಯಲು ಅರ್ಹರಾಗಿದ್ದು, ಸಚಿವಾಲಯ/ಇಲಾಖೆಯಲ್ಲಿನ ಅಧಿಕಾರಿಗೆ ಈಗಾಗಲೇ ಇಂತಹ ಸಾಧನವನ್ನು ನೀಡಿದ್ದರೆ, ಅವರಿಗೆ ನಾಲ್ಕು ವರ್ಷಗಳವರೆಗೆ ಹೊಸ ಸಾಧನವನ್ನು ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.(ಏಜೆನ್ಸೀಸ್)