ರಾವ್ ಕುಟುಂಬಕ್ಕೆ ಶತಾಯುಷಿಯ ಸಾಂತ್ವನ

shivamma
ಪುತ್ರನೊಂದಿಗೆ ಮಂಜುನಾಥ ರಾವ್ ಮನೆಗೆ ಭೇಟಿ ನೀಡಿದ್ದ ಶತಾಯುಷಿ ತಿಪಟೂರಿನ ಶಿವಮ್ಮ.
Published on

ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ ರಾವ್ ನಿವಾಸಕ್ಕೆ ಮಂಗಳವಾರ ತಿಪಟೂರಿನಿಂದ ಆಗಮಿಸಿದ 103 ವರ್ಷದ ವೃದ್ಧೆಯೊಬ್ಬರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ತನ್ನ ಪುತ್ರನೊಂದಿಗೆ ಬಸ್‌ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ತಿಪಟೂರಿನ ಶಿವಮ್ಮ, ವಿಜಯನಗರಕ್ಕೆ ತೆರಳಿ ಮಂಜುನಾಥ ರಾವ್ ಅವರ ಮನೆಯ ವಿಳಾಸವನ್ನು ಅಲ್ಲಿನ ಜನರಿಂದ ಕೇಳಿ ತಿಳಿದುಕೊಂಡು ಭೇಟಿ ನೀಡಿದರು. ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ಕೃತ್ಯವನ್ನು ಮಾಧ್ಯಮಗಳಲ್ಲಿ ನೋಡಿದ್ದೆ. ದೇಶದ ಸೈನಿಕರಿಗೆ ಬಲ ತುಂಬುವುದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವುದು ನನ್ನ ಭೇಟಿಯ ಉದ್ದೇಶ ಎಂದು ಶಿವಮ್ಮ ತಿಳಿಸಿದರು.

ಈಗ ಹಿಂದುಗಳ ಹತ್ಯೆ ನಡೆದಿದೆ. ಮುಂದೆ ಹಿಂದು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆರಂಭಿಸಿದರೆ ಏನು ಗತಿ ಎಂದು ಪ್ರಶ್ನಿಸಿದರು. ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಬೇಕು. ನಮ್ಮ ಸೈನಿಕರಿಗೆ ಮಾದೇಶ್ವರ ಹಾಗೂ ಮಂಜುನಾಥ ಸ್ವಾಮಿ ಶಕ್ತಿ ನೀಡಲಿ ಎಂದು ಶಿವಮ್ಮ ಆಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net