

ಹೈದರಾಬಾದ್: ಒಟಿಟಿ ಪ್ಲಾಟ್‌ಫಾರ್ಮ್ ಬಂದ ನಂತರ ಹಿಂಸಡ, ಥ್ರಿಲ್ಲರ್, ರೋಮ್ಯಾಂಟಿಕ್, ಸಖತ್ ಹಸಿಬಿಸಿಯಂಥ ಚಲನಚಿತ್ರಗಳು ಸ್ಟ್ರೀಮಿಂಗ್ ಆಗುತ್ತಿವೆ. ಅದೇ ರೀತಿ ಆಹಾ ಪ್ಲಾಟ್‌ಫಾರ್ಮ್ ನಲ್ಲಿ ಮೊದಲ ಬಾರಿಗೆ ಸಖತ್ ಬೋಲ್ಡ್ ಕಂಟೆಂಟ್ ಇರುವ ಚಿತ್ರ ಬಿಡುಗಡೆಯಾಗುತ್ತಿದೆ. ಲವ್ ಪದದ ಹಿಮ್ಮುಖದಿಂದ ಬಂದಿರುವ, ಪ್ರೀತಿಗೆ ಸಂಪೂರ್ಣ ವಿರುದ್ಧವಾದ ಪರಿಕಲ್ಪನೆ ಹೊಂದಿರುವ ಎವೋಲ್ ಚಿತ್ರರಸಿಕರನ್ನು ರಂಜಿಸಲು ಬರುತ್ತಿದೆ.
ಪ್ರೀತಿ ಕಾಮಕ್ಕೆ ತಿರುಗಿದರೆ ಏನಾಗುತ್ತದೆ ಎಂಬುದು ಈ ಚಿತ್ರದ ಸಾರ. ಇನ್ನು ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸೆನ್ಸಾರ್ ಮಂಡಳಿ ತಿರಸ್ಕರಿಸಿತ್ತು. ರಾಮ್ ವೆಲಗಪುಡಿ ನಿರ್ದೇಶನದ ಈ ಸಿನಿಮಾದಲ್ಲಿ ರೊಮ್ಯಾಂಟಿಕ್ ದೃಶ್ಯಗಳು ಕಾಣಸಿಗುವುದಿಲ್ಲ ಎನ್ನಲಾಗುತ್ತಿದೆ. ಈ ವಿವಾದಾತ್ಮಕ ಸಿನಿಮಾದಲ್ಲಿ ಎರಡು ಜೋಡಿಗಳ ನಡುವಿನ ಕಥೆಯನ್ನು ತುಂಬಾ ಬೋಲ್ಡ್ ಆಗಿ ಚಿತ್ರಿಸಲಾಗಿದೆ. ಈ ಚಿತ್ರವನ್ನು ಆಹಾ ವೇದಿಕೆ ಸ್ಟ್ರೀಮ್ ಮಾಡುತ್ತಿದೆ.
ಆಗಸ್ಟ್ 15ಕ್ಕೆ ಆಹಾದಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಕೂಡ ಮಾಡಲಾಗಿದೆ. ಈ ಸಿನಿಮಾದ ನಂತರ ಆಹಾ ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಂತೆ ಬೋಲ್ಡ್ ಕಂಟೆಂಟ್‌ಗೆ ಆದ್ಯತೆ ನೀಡುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.