ಈ ಆಘಾತದಿಂದ ಹೊರಬರಲು ನನಗೆ 5 ವರ್ಷ ಬೇಕಾಯಿತು: ಸೆಲಿನಾ ಜೇಟ್ಲಿ

celina
Published on

ಬೆಂಗಳೂರು: ನಟಿ ಸೆಲಿನಾ ಜೇಟ್ಲಿ 2017 ರಲ್ಲಿ ತಮ್ಮ ಅವಳಿ ಮಕ್ಕಳಲ್ಲಿ ಒಬ್ಬರಾದ ಶಂಶರ್​​​​ನನ್ನು ಕಳೆದುಕೊಂಡಾಗ ಅವರು ಮತ್ತು ಅವರ ಪತಿ ಪೀಟರ್ ಹಾಗ್ ಅನುಭವಿಸಿದ ನೋವು ಮತ್ತು ಆಘಾತವನ್ನು ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾ ಪೇಜ್​​ನಲ್ಲಿ ಹಂಚಿಕೊಂಡಿದ್ದಾರೆ.

"ಈ ಆಘಾತದಿಂದ ಹೊರಬರಲು ನನಗೆ 5 ವರ್ಷಗಳು ಬೇಕಾಯಿತು. ಹತಾಶೆ, ತೀವ್ರವಾದ ದುಃಖ, ಆತಂಕ, ನಿರಾಶೆ, ಅಪರಾಧ, ಕೋಪ, ಪ್ರೀತಿಯ ಭಾವನೆಗಳು ನಮ್ಮನ್ನು ಆವರಿಸಿಕೊಂಡಿತು'' ಎಂದು ಪೋಸ್ಟ್ ಮಾಡಿದ್ದಾರೆ.

ಸೆಲಿನಾ ಜೇಟ್ಲಿ ಅವರ ದುಗುಡವನ್ನು ಅರ್ಥ ಮಾಡಿಕೊಂಡ ಅವರ ಅಭಿಮಾನಿಗಳು ಸೆಲಿನಾ ಕುಟುಂಬಕ್ಕೆ ಶುಭ ಹಾರೈಸಿದ್ದಾರೆ. ತಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಏಕೆಂದರೆ ಅವರು ಹಂಚಿಕೊಂಡಿರುವ ಪೋಸ್ಟ್ ಇದೇ ರೀತಿ ಅಗ್ನಿಪರೀಕ್ಷೆಗೆ ಒಳಗಾದ ಪೋಷಕರಿಗೆ ಸಹಾಯ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net