ಅಮಿತಾಭ್, ಚಿರಂಜೀವಿ… ರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದ್ರು..?

aliya
Published on

ಅಯೋಧ್ಯೆ: ಇಂದು ರಾಮಮಂದಿರದಲ್ಲಿ ನಡೆಯುತ್ತಿರುವ ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ಅಯೋಧ್ಯೆ ನಗರವೆಲ್ಲ ವಧುವಿನಂತೆ ಸಿಂಗಾರಗೊಂಡಿದೆ. ದೂರದರ್ಶನ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಕ್ಷಾಂತರ ಜನರು ಸಮಾರಂಭವನ್ನು ಲೈವ್ ಆಗಿ ವೀಕ್ಷಿಸುತ್ತಿದ್ದಾರೆ. ಈ ಸಮಾರಂಭದ ಮರುದಿನವೇ ಈ ದೇವಾಲಯವನ್ನು ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಪ್ರಾಣಪ್ರತಿಷ್ಠೆಗೆ ದೇಶದ ವಿವಿಧ ಭಾಗಗಳಿಂದ ಉಡುಗೊರೆಗಳನ್ನು ಕಳುಹಿಸಲಾಗಿದೆ. ರಾಮಮಂದಿರದಲ್ಲಿ ಮಗುವಿನ ರೂಪದ ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ದೇಶ ಮತ್ತು ಪ್ರಪಂಚದಾದ್ಯಂತ ಭಕ್ತರು ಅಯೋಧ್ಯೆಗೆ ಆಗಮಿಸುತ್ತಿದ್ದು, ಯಾರೆಲ್ಲಾ ಸೆಲೆಬ್ರಿಟಿಗಳು ಬಂದಿದ್ದಾರೆ ನೋಡಿ...

ನಟರಾದ ಅಮಿತಾಬ್ ಬಚ್ಚನ್, ರಾಮ್ ಚರಣ್, ಅನುಪಮ್ ಖೇರ್, ಜಾಕಿ ಶ್ರಾಫ್, ವಿಕ್ಕಿ ಕೌಶಲ್-ಕತ್ರಿನಾ ಕೈಫ್, ಮಾಧುರಿ ದೀಕ್ಷಿತ್, ಆಯುಷ್ಮಾನ್ ಖುರಾನಾ, ಕೈಲಾಶ್ ಖೇರ್, ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ರೋಹಿತ್ ಶೆಟ್ಟಿ ಸೇರಿದಂತೆ ಅನೇಕ ನಟ-ನಟಿಯರು ಅಯೋಧ್ಯೆಗೆ ತಲುಪುತ್ತಿದ್ದಾರೆ.

ಭಾರತದಲ್ಲಿರುವ ಇಸ್ರೇಲಿ ರಾಯಭಾರಿ ನಾರ್ ಗಿಲೋನ್ ಮಾತನಾಡಿ, ರಾಮಮಂದಿರದ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಭಾರತದ ಜನತೆಗೆ ಹೃತ್ಪೂರ್ವಕ ಶುಭಾಶಯಗಳು. ಜಗತ್ತಿನಾದ್ಯಂತ ಇರುವ ಭಕ್ತರಿಗೆ ಇದೊಂದು ಐತಿಹಾಸಿಕ ಕ್ಷಣ. ರಾಮ ಮಂದಿರಕ್ಕೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net