ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

Oplus_16908290
ಸೋಮವಾರಪೇಟೆಯಲ್ಲಿ ಜಿಎಸ್‌ಟಿ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮವನ್ನು ಬೆಂಬಲಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಸಂಭ್ರಮಾಚರಣೆ ಮಾಡಿದರು. ಅಪ್ಪಚ್ಚು ರಂಜನ್, ಮನುಕುಮಾರ್, ದರ್ಶನ್, ಮಹೇಶ್ ಇದ್ದರು.
Published on

ಸೋಮವಾರಪೇಟೆ: ಜಿಎಸ್‌ಟಿ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಬೆಂಬಲಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಸಂಭ್ರಮಾಚರಣೆ ಮಾಡಿದರು.

ಖಾಸಗಿ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ, ಮೋದಿ ಸರ್ಕಾರಕ್ಕೆ ಜಯಘೋಷ ಹಾಕಿದರು. ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿಎಸ್‌ಟಿ ಸರಳೀಕರಣದಿಂದಾಗಿ ದಿನನಿತ್ಯ ಬಳಕೆಯ ಸುಮಾರು 375 ವಸ್ತುಗಳ ಬೆಲೆ ಇಳಿಕೆಯಾಗಿದೆ. ಇತಿಹಾಸದಲ್ಲಿ ಒಮ್ಮೆ ತೆರಿಗೆ ಹಾಕಿದರೆ ಮತ್ತೆ ಏರಿಕೆಯನ್ನೇ ಕಂಡಿದ್ದೆವು. ಆದರೆ ಇದೇ ಪ್ರಥಮ ಬಾರಿಗೆ ಭಾರಿ ಪ್ರಮಾಣದಲ್ಲಿ ತೆರಿಗೆ ಹೊರೆಯನ್ನು ಇಳಿಸಲಾಗಿದೆ. ಇದು ಬಡವರ ಮೇಲೆ ಮೋದಿ ಸರ್ಕಾರಕ್ಕೆ ಇರುವ ಕಾಳಜಿ ತೋರಿಸುತ್ತದೆ. ಹಲವು ಔಷಧ, ಹಾಲಿನ ಉತ್ಪನ್ನ, ಪುಸ್ತಕ, ಶೈಕ್ಷಣಿಕ ಪರಿಕರಗಳ ಮೇಲಿನ ಜಿಎಸ್‌ಟಿ ಶೂನ್ಯಕ್ಕೆ ಇಳಿದಿದೆ ಎಂದು ಅಭಿಪ್ರಾಯಿಸಿದರು.

ಮಂಡಲ ಅಧ್ಯಕ್ಷ ಗೌತಮ್ ಗೌಡ ಮಾತನಾಡಿ, ಜಿಎಸ್‌ಟಿ ಇಳಿಕೆ ಬಡ, ಸಣ್ಣ ಹಾಗೂ ಮಧ್ಯಮ ವ್ಯಾಪಾರಸ್ಥರಿಗೆ ಉಪಯೋಗ ಕಲ್ಪಿಸಿದಂತಾಗಿದೆ. ಇದರಿಂದ ಖರೀದಿಯ ಪ್ರಮಾಣ ಹೆಚ್ಚಾಗುತ್ತದೆ. ತನ್ಮೂಲಕ ವ್ಯಾಪಾರ ಅಧಿಕವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಪಕ್ಷದ ಮುಖಂಡರಾದ ಮನುಕುಮಾರ್ ರೈ, ದರ್ಶನ್ ಜೋಯಪ್ಪ, ಮಹೇಶ್ ತಿಮ್ಮಯ್ಯ, ಶರತ್‌ಚಂದ್ರ, ಕಂಠಿ ಕಾರ್ಯಪ್ಪ, ಶುಭಕರ್, ಕೆ.ಕೆ.ಸುಧಾಕರ್, ಕಲ್ಕಂದೂರು ಪ್ರಕಾಶ್, ಚೌಡ್ಲು ನೆಹರು, ಮಸಗೋಡು ಪ್ರಕಾಶ್, ಮಹಿಳಾ ಮೋರ್ಚಾದ ಕವಿತಾ ವಿರೂಪಾಕ್ಷ, ಇಂದಿರಾ ಮೋಣಪ್ಪ, ರೂಪಾ ಸತೀಶ್, ಎಚ್.ಎನ್.ತಂಗಮ್ಮ, ವರ್ತಕರ ಸಂಘದ ಅಧ್ಯಕ್ಷ ಧನುರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net