

ರಾಣೆಬೆನ್ನೂರ: ನಗರದ ಅಶೋಕ ವೃತ್ತದ ಬಳಿ ವಿರಾಟ್ ಹಿಂದು ಮಹಾಸಭಾ ಸಮಿತಿ ವತಿಯಿಂದ 3ನೇ ಬಾರಿಗೆ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂತಿರ್ ಶೋಭಾಯಾತ್ರೆ ಭಾನುವಾರ ನಗರದಲ್ಲಿ ಸಂಭ್ರಮ ಸಡಗರದಿಂದ ಜರುಗಿತು.
ಅಶೋಕ ವೃತ್ತದಿಂದ ಆರಂಭಗೊಂಡ ಶೋಭಾಯಾತ್ರೆಯು ಪೋಸ್ಟ್ ವೃತ್ತ, ಸಂಗಮ್ ಸರ್ಕಲ್, ರಂಗನಾಥ ನಗರ, ಸುಣಗಾರ ಓಣಿ, ಕುಂಬಾರ ಓಣಿ, ದೊಡ್ಡಪೇಟೆ, ಚಕ್ಕಿ ಮಿಕ್ಕಿ ಸರ್ಕಲ್, ಎಂ.ಜಿ. ರಸ್ತೆ, ದುರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಹಲಗೇರಿ ಕ್ರಾಸ್, ಬಸ್ ನಿಲ್ದಾಣ, ವಿನಾಯಕ ನಗರ, ರಾಜರಾಜೇಶ್ವರಿ ನಗರ, ಹಳೆ ಪಿ.ಬಿ.ರಸ್ತೆಯ ಮೂಲಕ ಎನ್.ವಿ. ಹೋಟೆಲ್ವೆರಗೂ ಸಾಗಿಬಂದಿತು. ನಂತರ ಮೂತಿರ್ಯನ್ನು ಹರಿಹರ ಬಳಿ ತುಂಗಾಭದ್ರಾ ನದಿಯಲ್ಲಿ ವಿಸಜಿರ್ಸಲಾಯಿತು.
ಶೋಭಾಯಾತ್ರೆ ಮೆರವಣಿಗೆ ಸಾಗಿಬರುವ ದಾರಿಯುದ್ದಕ್ಕೂ ವಿವಿಧ ಸರ್ಕಲ್ಗಳಲ್ಲಿ ದಾನಿಗಳು ಮತ್ತು ವಿವಿಧ ಸಮಾಜಗಳ ವತಿಯಿಂದ ಸಾರ್ವಜನಿಕರಿಗೆ ಉಪಹಾರ, ಕುಡಿಯುವ ನೀರು ಹಾಗೂ ಬಾಳೆಹಣ್ಣು ವಿತರಿಸಿದರು. ವಿವಿಧ ಬಗೆಯ ಗೊಂಬೆಗಳು, ಸಮಾಳ, ಹಲಗೆ ಹಾಗೂ ಯುವಕ, ಯುವತಿಯರಿಗೆ ಪ್ರತ್ಯೇಕ ಡಿಜೆ ಸಂಗೀತ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿದ್ದವು.
ಸಾವಿರಾರು ಜನರು ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡಿ ಜನಮನ ಸೂರೆಗೊಂಡರು. ಮೆರವಣಿಗೆಯಲ್ಲಿ ಶಿವನ 18ಅಡಿಯ ಎತ್ತರದ ನೃತ್ಯ ಮಾಡುವ ಪ್ರತಿಮೆ ಎಲ್ಲರ ಕೇಂದ್ರ ಬಿಂದುವಾಗಿತ್ತು.
ಸಮಿತಿಯ ಅಧ್ಯಕ್ಷ ನಾಗರಾಜ ಪವಾರ, ಪ್ರಮುಖರಾದ ಬಸವರಾಜ ಹುಲ್ಲತ್ತಿ, ರಮೇಶ ಗುತ್ತಲ, ಪರಮೇಶ ಗೂಳಣ್ಣನವರ, ದೀಪಕ ಹರಪನಹಳ್ಳಿ, ನಾಗರಾಜ ಸಾಲಗೇರಿ, ನಾಗರಾಜ ಬಣಕಾರ, ಪ್ರಕಾಶ ಹೊರಕೇರಿ, ಜಗದೀಶ ಅಂಕಲಕೋಟಿ, ಶಿವಕುಮಾರ ಅರ್ಕನಾಳ, ನಿತ್ಯಾನಂದ ಕುಂದಾಪುರ ಮತ್ತಿತರರು ಪಾಲ್ಗೊಂಡಿದ್ದರು.