ವಿಜೃಂಭಣೆಯ ಗುಜ್ಜಮ್ಮನ ಕೊಂಡೋತ್ಸವ

ವಿಜೃಂಭಣೆಯ ಗುಜ್ಜಮ್ಮನ ಕೊಂಡೋತ್ಸವ
Published on

ಸರಗೂರು: ತಾಲ್ಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಬುಧವಾರ ಗುಜ್ಜಮ್ಮನ ಕೊಂಡೋತ್ಸವ ಜಾತ್ರಾ ಮಹೋತ್ಸವ ವಿಜಂಭಣೆಯಿಂದ ನೆರವೇರಿತು.
ಕೊಂಡೋತ್ಸವಕ್ಕೂ ಮುನ್ನ ಕಬಿನಿ ಜಲಾಶಯದ ಹೊಳೆಯಲ್ಲಿ ವಾದ್ಯ ಮೇಳದೊಂದಿಗೆ ಗುಜ್ಜಮ್ಮನ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಪುನಹಃ ದೇವಾಲಯಕ್ಕೆ ತರಲಾಯಿತು. ಜಾತ್ರಾ ಮಹೋತ್ಸವ ಹಿನ್ನೆಲೆ ದೇವಾಲಯವನ್ನು ತಳಿರು- ತೋರಣ, ಹೂವು ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.

ಕೊಂಡೋತ್ಸವಕ್ಕೆ ಸಂಗ್ರಹಿಸಲಾಗಿದ್ದ ಕಂಗಳಿಮರ ಸೇರಿದಂತೆ ವಿವಿಧ ಜಾತಿಯ ಮರಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅರ್ಚಕರು ಕೊಂಡೋತ್ಸವಕ್ಕೆ ಅಗ್ನಿ ಸ್ಪರ್ಶಮಾಡಿದರು. ನಂತರ ಹರಕೆ ಹೊತ್ತ ಭಕ್ತರು ಕೊಂಡ ಹಾಯುವ ಮೂಲಕ ಭಕ್ತಿ ಸಮರ್ಪಿಸಿದರು.

ಮಾರಮ್ಮನ ಹಾಗೂ ಗುಜ್ಜಮ್ಮನ ವಿಗ್ರಹವನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಜಯನಗರ, ಚಮೇಗೌಡನಹುಂಡಿ, ಕಾಳೆಗೌಡನಹುಂಡಿ, ಗೊತ್ತಾಗಾಲಹುಂಡಿ, ಸರಗೂರು, ಶಾಂತಿಪುರ, ಕುನ್ನಪಟ್ಟಣ, ಪುರದಕಟ್ಟೆ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.

ಗ್ರಾಮದ ಯಜಮಾನ ರತ್ನಯ್ಯ, ನಂಜಪ್ಪ, ಕೊತ್ತೇಗಾಲ ಗ್ರಾಮದ ಮಂಜುನಾಥ್, ರಿತೀಶ್, ಆದಿರಾಜಪ್ಪ, ಕೊತ್ತೇಗಾಲ, ತಿಮ್ಮಯ್ಯ, ಕಾಳಸ್ವಾಮಿ, ಚನ್ನಬಸವ ದೇವರು, ಸಚಿನ್ ಸ್ವಾಮಿ, ನಾಗರಾಜು, ನಾಗಯ್ಯ, ಸುರೇಶ್, ಪ್ರಭು, ಕೆ.ಟಿ.ಹರೀಶ್, ಯೋಗೀಶ್ ಕುಮಾರ್, ಶಂಭುಲಿಂಗನಾಯಕ, ದೊಡ್ಡರಾಜು, ನಿಂಗರಾಜು, ಭೀಮನಾಯಕ, ಹಾಲಯ್ಯ, ಕಾಳಸ್ವಾಮಪ್ಪ, ಚಲುವಚಾರ್, ಶ್ರೀಕಂಠ, ಶಂಕರ್, ಸುಂದರ್, ವೆಂಕಟೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net