ಸಂಭ್ರಮದಿಂದ ನಾಗರ ಪಂಚಮಿ ಆಚರಣೆ

snd6
ಸಿಂಧನೂರಿನ 13ನೇ ವಾರ್ಡ್‌ನ ಮಲ್ಲಯ್ಯಸ್ವಾಮಿ ದೇವಸ್ಥಾನದ ಬಳಿಯ ನಾಗರಕಟ್ಟೆಯಲ್ಲಿನ ನಾಗಮೂರ್ತಿಗಳಿಗೆ ಮಹಿಳೆಯರು ನಾಗರ ಪಂಚಮಿ ಪ್ರಯುಕ್ತ ಹಾಲೆರೆದರು.
Published on

ಸಿಂಧನೂರು: ನಗರ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಭಾನುವಾರ ಸಡಗರದಿಂದ ಮನೆ ಹಾಗೂ ದೇವಸ್ಥಾನಗಳಲ್ಲಿ ನಾಗರ ಮೂರ್ತಿಗೆ ವಿಶೇಷ ಪೂಜೆ ಮಾಡಿ, ಹಾಲೆರೆದರು.

ಮನೆ ಬಾಗಿಲಿಗೆ ಮಾವಿನ ತೋರಣಗಳಿಂದ ಅಲಂಕರಿಸಿದರು, ಮನೆ ಮುಂದೆ ರಂಗೋಲಿ ಹಾಕುವ ಮೂಲಕ ನಾಗರ ಪಂಚಮಿಯನ್ನು ಸಂಭ್ರಮದಿಂದ ಸ್ವಾಗತಿಸಿದರು. ವಿವಿಧ ದಿನಿಸಿನ ಉಂಡಿ, ಕೊಬ್ಬರಿ ಇತರ ಸಿಹಿ ಪದಾರ್ಥಗಳನ್ನು ದೇವರಿಗೆ ಅರ್ಪಿಸಿದರು.

ನಗರದ ಅಗ್ನಿ ಆಂಜನೇಯ ದೇವಸ್ಥಾನ ಬಳಿಯ ನಾಗರ, 7ನೇ ವಾರ್ಡಿನಲ್ಲಿರುವ ನಾಗದೇವರ ಕಟ್ಟೆ, 13ನೇ ವಾರ್ಡಿನ ಮಲ್ಲಯ್ಯ ದೇವಸ್ಥಾನ ಬಳಿಯ ನಾಗರಕಟ್ಟೆ ಸೇರಿ ನಗರದ ವಿವಿಧೆಡೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪಂಚಮಿಯನ್ನು ಸಂತಸದಿಂದ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net