ಸಂಭ್ರಮದಿಂದ ನಾಗರ ಪಂಚಮಿ ಆಚರಣೆ

20 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ನಗರ ಸೇರಿ ಗ್ರಾಮೀಣ ಭಾಗದ ಜನರು ಭಾನುವಾರ ಸಂಭ್ರಮದಿಂದ ಆಚರಿಸಿದರು.
ಮಳೆ, ಬೆಳೆ, ಜೀವನ ಸಮೃದ್ಧಗೊಳಿಸುವಂತೆ ನಾಗದೇವರಿಗೆ ಪೂಜೆ ಸಲ್ಲಿಸಿದರು. ಬೆಳಗ್ಗೆಯಿಂದಲೇ ನಗರದ ಜನರು ಮನೆಯಲ್ಲಿ ಹಾಗೂ ವಿವಿಧ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗಳ ಮೂರ್ತಿಗಳು, ಹಾವಿನ ಹುತ್ತಗಳಿಗೆ ಹಾಲೆರೆದು ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಹಬ್ಬದ ಅಂಗವಾಗಿ ಗೋಲ್ ಬೊಗರಿ, ಜೋಕಾಲಿಯಲ್ಲಿ ಜೀಕುವ ಮೂಲಕ ಮಹಿಳೆಯರು, ಮಕ್ಕಳು ಸಂಭ್ರಮದ ಅಲೆಯಲ್ಲಿ ತೇಲಿದರು. ಇದೇ ವೇಳೆ ಮನೆಯಲ್ಲಿ ತಯಾರಿಸಿದ್ದ ಶೇಂಗಾ, ಪುಠಾಣಿ, ರವೆ, ದಾನಿ, ಅಳ್ಳಿಟ್ಟು, ಎಳ್ಳು ಸೇರಿ ಇನ್ನಿತರ ಉಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ, ಬಳಿಕ ಮನೆಯ ಮಂದಿಯೆಲ್ಲ ಒಟ್ಟಿಗೆ ಕುಳಿತು ಭೋಜನ ಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net