

ವಾಷಿಂಗ್ಟನ್: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾ ನಿ ನರೇಂದ್ರ ಮೋದಿ ಬುಧವಾರ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಸಂಭ್ರಮಕ್ಕಾಗಿ ಅಮೆರಿಕದ ಉದ್ದಗಲಕ್ಕೂ ಇರುವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗುತ್ತಿದೆ. ರಾಮ ದೇವಾಲಯದ ಡಿಜಿಟಲ್ ಚಿತ್ರಗಳನ್ನು ಇರಿಸಿದ ಶ್ರೀರಾಮ ಟ್ಯಾಬ್ಲೋ ಜತೆ ಯುಸ್ ಕ್ಯಾಪಿಟಲ್ ಹಿಲ್ನಲ್ಲಿ ಮಂಗಳವಾರ ರಾತ್ರಿ ಭವ್ಯ ಮೆರವಣಿಗೆ ನಡೆಸಲಿದ್ದಾರೆ.
ಬುಧವಾರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಿಸಲಿರುವ ಕಾರಣ, ಅಮೆರಿಕದ ಉದ್ದಗಲಕ್ಕೂ ಇರುವ ದೇಗುಲಗಳಲ್ಲಿ ವಿಶೇಷ ಪೂಜೆ ಆಯೋಜಿಸುವ ಮೂಲಕ ಭಾರತೀಯ-ಅಮೆರಿಕನ್ನರು ರಾಮ ದೇಗುಲ ನಿರ್ಮಾಣದ ಸಂಭ್ರಮ ಆಚರಿಸಲಿದ್ದಾರೆ. ಅಲ್ಲದೆ, ಪ್ರತಿಯೊಂದು ಮನೆಯಲ್ಲೂ ದೀಪ ಬೆಳಗಿಸಲು ನಿರ್ಧರಿಸಿದ್ದಾರೆ.
ದ ಹಿಂದು ಮಂದಿರ್ ಎಕ್ಸಿಕ್ಯೂಟೀವ್ಸ್ ಕಾನ್ಫರೆನ್ಸ್ ಮತ್ತು ಹಿಂದು ಮಂದಿರ್ ಪ್ರೀಸ್ಟ್ಸ್ ಕಾನ್ಫರೆನ್ಸ್ ವರ್ಚುಯಲ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಕರೆ ನೀಡಿದ್ದಾರೆ. ನ್ಯೂಯಾರ್ಕ್ನಲ್ಲಿರುವ ಭಾರತೀಯ ಅಮೆರಿಕನ್ನರು ಕೂಡ ರಾಮ ದೇಗುಲದ ಸಂಭ್ರಮ ಆಚರಿಸಲು ನಿರ್ಧರಿಸಿದ್ದು, ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್ನಲ್ಲಿ ಶ್ರೀ ರಾಮ ಮಂದಿರದ 3ಡಿ ಪ್ರತಿಕೃತಿಗಳನ್ನು ಬೃಹತ್ ಪರದೆಗಳ ಮೇಲೆ ಪ್ರದರ್ಶಿಸಲಾಗುತ್ತದೆ.