

ಹೊಸನಗರ: ಬಿದನೂರು ನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆರಾಧಾನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಪುರೋಹಿತರಾದ ಕಟ್ಟೆ ಗುರುರಾಜ ಆಚಾರ್ಯ ನೇತೃತ್ವದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಅಷ್ಟೋತ್ತರ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾತಿ ಮತ್ತು ಅನ್ನಸಂತರ್ಪಣೆ ನಡೆಯಿತು. ರಾಯರ ಪಲ್ಲಕ್ಕಿ ಉತ್ಸವ ದೇಗುಲದಲ್ಲಿ ಗಮನ ಸೆಳೆಯಿತು. ಕಾರ್ತಿಕ ಭಟ್ ಮುದ್ರಾಡಿ, ಕೆ.ಎಚ್.ಸುಧೀಂದ್ರ ಸಾಗರ, ಕುಮಾರ ಭಟ್, ಕಟ್ಟೆ ನಾಗರಾಜ ಭಟ್, ವಂದಗದ್ದೆ ಶೇಷಾದ್ರಿ, ನಗರಗದ್ದೆ ಮನೆತನದವರು, ಸುತ್ತಮುತ್ತಲಿನ ಗ್ರಾಮದ ಭಕ್ತರು ಆರಾಧನೆಯಲ್ಲಿ ಪಾಲ್ಗೊಂಡಿದ್ದರು.