ಕಳೆದ ಮೊಬೈಲ್‌ಗಳ ಪತ್ತೆಗೆ ಸಿಇಐಆರ್ ಪೋರ್ಟ್‌ಲ್

aac29f68-0c69-487b-b5dc-974b3e101bf8-05
Published on

ಚಿತ್ರದುರ್ಗ: ಕಳೆದುಕೊಂಡ ಮೊಬೈಲ್‌ನ್ನು ಸಿಇಐಆರ್ ಪೋರ್ಟ್‌ಲ್ ಬಳಸಿ ಪತ್ತೆ ಹಚ್ಚಿರುವ ಐಮಂಗಲ ಪೊಲೀಸರು ಅದನ್ನು ಮಾಲೀಕರಿಗೆ ಗುರುವಾರ ಒಪ್ಪಿಸಿದ್ದಾರೆ.

ಕಳವಾದ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡಲು ಅದರ ಮಾಲೀಕರಿಗೆ ಅವಕಾಶವಾಗುವಂತೆ ಕೇಂದ್ರ ಸರ್ಕಾರ ಸಿಇಐಆರ್ ವೆಬ್‌ಸೈಟ್ ರೂಪಿಸಿದೆ.

ಇದರಲ್ಲಿ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಯರಬಳ್ಳಿ ನಿವಾಸಿ ರಜನಿಕಾಂತ್ ಎಂಬುವರು ಕಳೆದು ಹೋಗಿದ್ದ ತಮ್ಮ ಮೊಬೈಲ್ ವಿವರ ನಮೂದಿಸಿದ್ದರು. ಈ ಮೊಬೈಲ್‌ನ್ನು ಬೇರೆಯವರು ಬಳಸುತ್ತಿರುವುದನ್ನು ಪಿಎಸ್‌ಐ ಸುರೇಶ್ ಮತ್ತವರ ಸಿಬ್ಬಂದಿ ಪತ್ತೆ ಹಚ್ಚಿದ್ದರು.

ಅದನ್ನು ಜಿಲ್ಲಾರಕ್ಷಣಾಧಿಕಾರಿ ಕಚೇರಿಯಲ್ಲಿ ರಜನಿಕಾಂತ್ ಅವರಿಗೆ ಎಸ್ಪಿ ಕೆ.ಪರಶುರಾಮ ಹಸ್ತಾಂತರಿಸಿದರು. ಈವರೆಗೆ 17 ಮೊಬೈಲ್‌ಗಳ ವಿವರ ಪೋರ್ಟ್‌ಲ್‌ನಲ್ಲಿ ನಮೂದಾಗಿವೆ ಎಂದು ಎಸ್ಪಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net