ಸಿಡಿ ಲೇಡಿ ಮತ್ತೆ ವಿಡಿಯೋ ಮೂಲಕ ಪ್ರತ್ಯಕ್ಷ; ಎರಡನೇ ವಿಡಿಯೋ ಬಿಡುಗಡೆ

cd case
Published on

ಬೆಂಗಳೂರು: ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ 'ಸಂತ್ರಸ್ತ' ಯುವತಿ ಮತ್ತೆ ಎರಡನೇ ವಿಡಿಯೋ ಮೂಲಕ ಕಾಣಿಸಿಕೊಂಡಿದ್ದಾಳೆ. ನಾನು ಈಗಲೇ ಎಸ್​ಐಟಿ ಮುಂದೆ ಬರಲ್ಲ. ನನ್ನ ಅಪ್ಪ-ಅಮ್ಮನ ಸೇಫ್ಟಿ ಮುಖ್ಯ. ಅವರು ಸೇಫ್​ ಆಗಿದ್ದಾರೆ ಅಂತ ಗೊತ್ತಾದ ಮೇಲೆ ನಾನು ತನಿಖೆಗಾಗಿ ಪೊಲೀಸರ ಮುಂದೆ ಹಾಜರ್​ ಆಗ್ತೀನಿ ಎಂದು ಯುವತಿ ಹೇಳಿದ್ದಾಳೆ.

ನಾನು ಕಿಡ್ನ್ಯಾಪ್​ ಆಗಿದ್ದೇನೆ ಅಂತ ನನ್ನ ಅಪ್ಪ-ಅಮ್ಮ ಸ್ವ ಇಚ್ಛೆಯಿಂದ ಕಂಪ್ಲೇಂಟ್​ ಕೊಡೋಕೆ ಸಾಧ್ಯಾನೆ ಇಲ್ಲ. ನಾನು ತಪ್ಪೇ ಮಾಡಿಲ್ಲ ಅಂತ ನನ್ನ ಅಪ್ಪ-ಅಮ್ಮನಿಗೆ ಗೊತ್ತಿದೆ. ನನಗೆ ನ್ಯಾಯ ಸಿಗುತ್ತೆ ಎಂದು ಎರಡು ದಿನದಿಂದ ಅನ್ನಿಸುತ್ತಿದೆ. ನನ್ನ ಅಪ್ಪ-ಅಮ್ಮನನ್ನು ರಕ್ಷಿಸಿ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ರಮೇಶ್​ ಕುಮಾರ್​ ಮತ್ತು ಇನ್ನಿತರ ಮಹಿಳಾ ಸಂಘಟನೆಯವರಿಗೆ ಕೇಳಕೊಳ್ತೇನೆ ಎಂದು ಯುವತಿ ಪ್ರತಿಪಕ್ಷ ನಾಯಕರಿಗೆ ಮನವಿ ಮಾಡಿದ್ದಾಳೆ.

ನಾನು ಮಾ.12ರಂದು ಒಂದು ವಿಡಿಯೋ ಮಾಡಿ ಎಸ್​ಐಟಿ ಅವರಿಗೆ ತಲುಪಿಸಿದ್ದೆ. ಆದರೆ, ಆ ವಿಡಿಯೋವನ್ನು ರಮೇಶ್​ ಜಾರಕಿಹೊಳಿ ತರಾತುರಿಯಲ್ಲಿ ದೂರುಕೊಟ್ಟ ಅರ್ಧಗಂಟೆ ಬಳಿಕ ರಿಲೀಸ್​ ಮಾಡ್ತಾರೆ. ಇದನ್ನ ನೋಡಿದ್ರೆ ಗೊತ್ತಾಗುತ್ತೆ ಎಸ್​ಐಟಿ ಅವರು ಯಾರ ಪರ ಇದ್ದಾರೆ ಎಂದು ಎಸ್​ಐಟಿ ವಿರುದ್ಧವೇ ಸಿಡಿ ಲೇಡಿ ಗಂಭೀರ ಆರೋಪ ಮಾಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net