ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು... ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

cd case lady complint
Published on

ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ 24 ದಿನದ ಬಳಿಕ ತನ್ನ ವಕೀಲರ ಮೂಲಕ ಪೊಲೀಸ್​ ಕಮಿಷನರ್​ ಕಚೇರಿಗೆ ದೂರಿನ ಪ್ರತಿ ಕಳಿಸಿದ್ದಾಳೆ. ರಮೇಶ್​ ಜಾರಕಿಹೊಳಿಯಿಂದ ತನಗಾದ ಅನ್ಯಾಯದ ಬಗ್ಗೆ ದೂರಿನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.

'ಕಿರುಚಿತ್ರ ನಿರ್ಮಿಸುವ ಸಲುವಾಗಿ ರಮೇಶ್​ಜಾರಕಿಹೊಳಿ ಅವರನ್ನ ಭೇಟಿಯಾಗಿದೆ. ಆಗ ನನ್ನ ಮೊಬೈಲ್​ ನಂಬರ್​ ಪಡೆದ ಅವರು ಒಮ್ಮೆ ಕರೆ ಮಾಡಿ ಸಲುಗೆಯಿಂದ ಮಾತನಾಡಿಸಿದರು. ದೊಡ್ಡ ವ್ಯಕ್ತಿ, ಮಿನಿಸ್ಟರ್​ ನನ್ನನ್ನು ಆಪ್ತವಾಗಿ ಮಾತನಾಡಿಸಿದ ಖುಷಿಯಲ್ಲಿ ನಾನು ಅವರನ್ನ ನಂಬಿದೆ. ಅಲ್ಲದೆ ಸರ್ಕಾರಿ ಉದ್ಯೋಗ ಕೊಡಿಸುವೆ, ಆದರೆ ನೀನು ನನಗೆ ಎಲ್ಲ ರೀತಿಯಲ್ಲೂ ಸಹಕರಿಸು ಎಂದರು. ಕೆಲಸ ಕೊಡಿಸುತ್ತಾರೆ ಎಂಬ ಭರವಸೆಯಲ್ಲಿ ನಾನು ಒಪ್ಪಿದೆ. ಅವರು ದೆಹಲಿಯ ಕರ್ನಾಟಕ ಭವನದಲ್ಲಿದ್ದೇನೆ ಎಂದು ನನ್ನ ಮೊಬೈಲ್​ಗೆ ವಿಡಿಯೋ ಕರೆ ಮಾಡಿದ ರಮೇಶ್​ ಜಾರಕಿಹೊಳಿ, ನನ್ನೊಂದಿಗೆ ಲೈಂಗಿಕವಾಗಿ ಮಾತನಾಡಿದರು. ಅಲ್ಲದೆ, ನನಗೆ ಬಟ್ಟೆ ತೆಗೆದು ಖಾಸಗಿ ಅಂಗಗಳನ್ನು ತೋರಿಸುವಂತೆ ಕೇಳಿದರು. ಅವರು ಹೇಳಿದಂತೆ ನಾನು ನಗ್ನವಾಗಿ ತೋರಿಸಿದೆ...' ಎಂದು ದೂರಿನಲ್ಲಿ ಯುವತಿ ಬರೆದಿದ್ದಾಳೆ.

ಅಷ್ಟೇ ಅಲ್ಲ, ಬೆಂಗಳೂರಿಗೆ ಬಂದ ರಮೇಶ್​ ಜಾರಕಿಹೊಳಿ ಅಪಾರ್ಟ್​ಮೆಂಟ್​ಗೆ ಕರೆಸಿಕೊಂಡು ಏನೆಲ್ಲ ಮಾಡಿದರು, ಎಲ್ಲವೂ ಮುಗಿದ ಮೇಲೆ ಕೊನೆಗೆ ಏನಾಯ್ತು ಎಂಬುದನ್ನೂ ಆಕೆ ಈ ದೂರಿನ ಪ್ರತಿಯಲ್ಲಿ ವಿವರಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net