ನ್ಯಾಯಾಧೀಶರ ಮುಂದೆ ಹಾಜರಾದ ಸಿಡಿ ಯುವತಿ: ನಿಜಕ್ಕೂ ಆಕೆ ಕಿಡ್ನ್ಯಾಪ್​ ಆಗಿದ್ಲಾ?

CD Lady
Published on

ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ 'ಸಂತ್ರಸ್ತ' ಯುವತಿ ಮತ್ತೊಮ್ಮೆ ನ್ಯಾಯಾಧೀಶರ ಮುಂದೆ ಹಾಜರಾಗಿದ್ದು, ಸಿಡಿ ಲೇಡಿ ಕಿಡ್ನ್ಯಾಪ್​ ಕೇಸ್​ನ ರಹಸ್ಯ ಹೊರಬರುವ ಸಾಧ್ಯತೆ ಇದೆ.

ಸಿಡಿ ಕೇಸ್​ ಬಯಲಾಗುತ್ತಿದ್ದಂತೆ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಯುವತಿ ಪೋಷಕರು ಬೆಳಗಾವಿಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಆರ್​ಟಿ ನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು. ಈ ಸಂಬಂಧ ಸಿಆರ್​ಪಿಸಿ 164 ಅಡಿ ಹೇಳಿಕೆ ನೀಡಲು ಇಂದು (ಸೋಮವಾರ) ಮಧ್ಯಾಹ್ನ ವಸಂತನಗರ ಜಸ್ಮಾಭವನದ ಕೋರ್ಟ್​ನ ನ್ಯಾಯಾಧೀಶರ ಮುಂದೆ ಯುವತಿ ಹಾಜರ್​ ಆಗಿದ್ದಾಳೆ. ಯುವತಿ ಆಗಮಿಸಿದ ಹಿನ್ನೆಲೆಯಲ್ಲಿ ಗುರುನಾನಕ್ ಕೋರ್ಟ್ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net