28 ದಿನದ ಬಳಿಕ ಕೋರ್ಟ್​ನಲ್ಲಿ ಸಿಡಿ ಲೇಡಿ ಪ್ರತ್ಯಕ್ಷ! ರಮೇಶ್​ ಜಾರಕಿಹೊಳಿ ಎದೆಯಲ್ಲಿ ಢವಢವ

cd case lady complint
Published on

ಬೆಂಗಳೂರು: ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿರುವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಕೇಸ್​ನ 'ಸಂತ್ರಸ್ತ' ಯುವತಿ ವಸಂತನಗರ ಗುರುನಾನಕ್​ ಭವನದಲ್ಲಿರುವ ಕೋರ್ಟ್​ನ ನ್ಯಾಯಾಧೀಶರ ಮುಂದೆ ಇಂದು(ಮಂಗಳವಾರ) ಮಧ್ಯಾಹ್ನ 2.30ಕ್ಕೆ ಹಾಜರ್​ ಆಗಿದ್ದಾಳೆ.

ಇದಕ್ಕೂ ಮುನ್ನ ಮೇಲ್ ಮೂಲಕ ನ್ಯಾಯಾಧೀಶರಿಗೆ ಪತ್ರ ಕಳಿಸಿದ್ದ ಸಿಡಿ ಲೇಡಿ, ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್​ಐಟಿ ತನಿಖೆಯಾಗಬೇಕು. ನಮ್ಮ ಪೋಷಕರಿಗೆ ಡಿವೈಎಸ್​ಪಿ ಕಟ್ಟಿಮನಿ ಎಂಬುವರು ಒತ್ತಡ ಹಾಕಿ ಜಾರಕಿಹೊಳಿ ಪರ ಹೇಳಿಕೆ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಸಹ ನಾಶ ಮಾಡಲಾಗುತ್ತಿದೆ. ರಮೇಶ್ ಜಾರಕಿಹೊಳಿ ತುಂಬಾ ಪ್ರಭಾವಿಯಾಗಿದ್ದು, ಸರ್ಕಾರ ಹಾಗೂ ಎಸ್​ಐಟಿಯನ್ನು ತನ್ನಿಷ್ಟದಂತೆ ಬಳಸಿಕೊಳ್ಳುತ್ತಿದ್ದಾರೆ. ನ್ಯಾಯಾಲಯವೇ ನನಗೆ ಸೂಕ್ತ ಭದ್ರತೆ ನೀಡಬೇಕೆಂದು ಕೋರಿದ್ದಳು. ಇದನ್ನೂ ಓದಿರಿ ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

ನಿನ್ನೆ(ಸೋಮವಾರ) ಎಸ್​ಐಟಿ ವಿಚಾರಣೆ ಎದುರಿಸಿದ್ದ ರಮೇಶ್​ ನನಗೆ ಸಿಡಿ ಲೇಡಿ ಯಾರೆಂದು ಗೊತ್ತೇ ಇಲ್ಲ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಯುವತಿ ಮಾತ್ರ ಆ ವಿಡಿಯೋದಲ್ಲಿ ಇರುವುದೆಲ್ಲ ಸತ್ಯ, ಉದ್ಯೋಗದ ಆಮಿಷವೊಡ್ಡಿ ನನ್ನನ್ನ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಅನ್ಯಾಯ ಮಾಡಿದರು. ನ್ಯಾಯ ಕೇಳಿದ್ದಕ್ಕೆ ಅವಾಚ್ಯವಾಗಿ ನಿಂದಿಸಿದ್ದರು. ಈಗ ವಿಡಿಯೋ ಬಹಿರಂಗ ಮಾಡಿ ಮರ್ಯಾದೆ ತೆಗೆದಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಎಂದು ಯುವತಿ ವಿಡಿಯೋ ಮೂಲಕ ಮಾತ್ರವಲ್ಲ, ಪೊಲೀಸ್​ ಕಮಿಷನರ್​ಗೆ ಬರೆದ ಪತ್ರ ಹಾಗೂ ನ್ಯಾಯಾಧೀಶರಿಗೆ ಬರೆದಿದ್ದ ಪತ್ರದಲ್ಲೂ ವಿವರಿಸಿದ್ದಳು.

28 ದಿನಗಳ ಬಳಿಕ ಇಂದು ಸಿಡಿ ಲೇಡಿಯನ್ನ ವಿಐಪಿ ಭದ್ರತೆಯಲ್ಲಿ ಕೋರ್ಟ್​ಗೆ ಕರೆತರಲಾಗಿದ್ದು, ಆಕೆ ಯಾವ ಹೇಳಿಕೆ ಕೊಡಲಿದ್ದಾಳೆ ಎಂಬ ಕುತೂಹಲ ರಾಜ್ಯದ ಜನತೆಯಲ್ಲಿದೆ. ನ್ಯಾಯಾಲಯದಲ್ಲಿ ಸಿಡಿ ಲೇಡಿ ಕೊಡುವ ಹೇಳಿಕೆ ತನ್ನ ಬುಡಕ್ಕೆ ಬಂದರೆ, ಬಂಧನಕ್ಕೆ ಒಳಗಾಗಬೇಕಾಗುತ್ತಾ? ಎಂದು ರಮೇಶ್ ಜಾರಕಿಹೊಳಿಯಲ್ಲಿ ಭೀತಿ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net