

ಕಲಬುರಗಿ: ನಗರದಲ್ಲಿ ಜೂಜು ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬಿಜೆಪಿ ಕಾರ್ಪೊರೇಟರ್ ಸೇರಿದಂತೆ ಏಳು ಮಂದಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಬಿಜೆಪಿ ಕಾರ್ಪೊರೇಟರ್ ಸಚೀನ್ ಕಡಗಂಚಿ ಸೇರಿದಂತೆ ಏಳು ಜನರ ಬಂಧನ ಮಾಡಲಾಗಿದೆ. ಸಚೀನ್ ಕಡಗಂಚಿ, ಆಳಂದ ಕಾಲೋನಿಯ ವಾರ್ಡ್ ನಂಬರ್ 8 ಬಿಜೆಪಿ ಕಾರ್ಪೊರೇಟೆರ್. ಕಾರ್ಪೊರೇಟರ್ ಸಚೀನ್ ಕಡಗಂಚಿ ಸೇರಿದಂತೆ ಏಳು ಜನರ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ಕಾರ್ಪೊರೇಟರ್ ಸಚೀನ್ ಕಡಗಂಚಿ, ವಿಶಾಲ್, ಆನಂದ್, ಮಹಾಂತೇಶ್, ಶಿವರಾಜ್, ಸಿದ್ದರಾಮ್, ಶರಣುಸೇರಿದಂತೆ ಏಳು ಜನರ ಬಂಧನ ಮಾಡಲಾಗಿದೆ.
ಕಳೆದ ರಾತ್ರಿ ಕಲಬುರಗಿ ನಗರದ ಶೆಟ್ಟಿ ಕಾಂಪ್ಲೆಕ್ಸ್ ಬಳಿಯ ಶೆಡ್‌ವೊಂದರಲ್ಲಿ ಇಸ್ಪಿಟ್ ಆಡುತ್ತಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳು ಶರಣಾಗಿದ್ದಾರೆ. ಬಂಧಿತರಿಂದ 1 ಲಕ್ಷ ರೂ ನಗದು ಹಣ, ಮೊಬೈಲ್ ಸೇರಿದಂತೆ ಅನೇಕ ವಸ್ತುಗಳ ಜಪ್ತಿ ಮಾಡಲಾಗಿದ್ದು, ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.