ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಗೆ ಸಿಸಿಬಿ ನೋಟಿಸ್​

Prashant Sambargi
Published on

ಬೆಂಗಳೂರು: ಸ್ಯಾಂಡಲ್​​ವುಡ್​ಗೆ ಡ್ರಗ್​ ಲಿಂಕ್ ಇದೆ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿ, ಈಗಲೂ ದಿನಕ್ಕೊಂದು ಮಾಹಿತಿ ನೀಡುತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಅವರಿಗೆ ಸಿಸಿಬಿ ನೋಟಿಸ್​ ನೀಡಿದೆ.

ಡ್ರಗ್​ ಮಾಫಿಯಾ ಕುರಿತು ನಿಮಗೆ ಗೊತ್ತಿರುವ ಎಲ್ಲ ಮಾಹಿತಿಯನ್ನೂ ಹಂಚಿಕೊಳ್ಳಬೇಕು. ನಾಳೆಯೇ ಸಿಸಿಬಿ ಕಚೇರಿಗೆ ಆಗಮಿಸಿ ಎಂದು ನೋಟಿಸ್​ನಲ್ಲಿ ಸೂಚಿಸಲಾಗಿದೆ. ಇದನ್ನೂ ಓದಿ: ತೆರಿಗೆ ತಪ್ಪಿಸಿಕೊಳ್ಳಲು ಹೀಗಾ ಮಾಡೋದು!; ಎ. ಆರ್​ ರೆಹಮಾನ್​ಗೆ ಮದ್ರಾಸ್​ ಹೈಕೋರ್ಟ್ ನೋಟಿಸ್​

ಪ್ರಶಾಂತ್​ ಸಂಬರಗಿ ಅವರು ಡ್ರಗ್ಸ್​ ಮಾಫಿಯಾ ಕುರಿತಂತೆ ಇದುವರೆಗೂ ಪೊಲೀಸರಿಗೆ ಅಧಿಕೃತವಾಗಿ ಹೇಳಿಲ್ಲ. ಬದಲಿಗೆ ಮಾಧ್ಯಮಗಳಿಗೆ ಹೇಳಿಕೆ ಕೋಡುವಾಗ ದಿನಕ್ಕೊಂದು ಮಾಹಿತಿ ನೀಡುತ್ತಿದ್ದಾರೆ. ಸದ್ಯ ನಟಿಯರಾದ ಸಂಜನಾ, ರಾಗಿಣಿ ಸೇರಿ ಹಲವರ ಬಂಧನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net