ರಾಗಿಣಿ ಗೆಳೆಯನ ಮಾಜಿ ಪತ್ನಿಗೂ ಸಿಸಿಬಿ ನೋಟಿಸ್​

Ragini
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಮಾದಕ ನಟಿ ರಾಗಿಣಿ ದ್ವಿವೇದಿಯ ಗೆಳೆಯ ರವಿಶಂಕರ್​ನ ಮಾಜಿ ಪತ್ನಿಗೂ ಸಿಸಿಬಿ ನೋಟಿಸ್​ ನೀಡಿದೆ.

ರವಿಶಂಕರ್ ಮಾಜಿ‌ ಪತ್ನಿ ಅರ್ಚನಾ ನಾಯ್ಕ್​ಗೆ ವಾಟ್ಸ್​ಆ್ಯಪ್ ಮೂಲಕ ನೋಟಿಸ್ ಕಳುಹಿಸಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇಡೀ ಡ್ರಗ್ಸ್ ಪ್ರಕರಣ ಹೊರಗೆ ಬರೋಕೆ ಪ್ರಮುಖ ಕಾರಣ ಈ ರವಿಶಂಕರ್. ಈತ ಬಾಯ್ಬಿಟ್ಟ ಮಾಹಿತಿ ಆಧರಿಸಿ ಕಾಟನ್​ಪೇಟೆಯಲ್ಲಿ ಕೇಸ್ ದಾಖಲಾಗಿದೆ. ನಟಿಯರಾದ ರಾಗಿಣಿ, ಸಂಜನಾ ಅಲಿಯಾಸ್​ ಮಹಿರಾ, ಸಂಜನಾ ಆಪ್ತ ರಾಹುಲ್, ಶಿವಪ್ರಕಾಶ್ ಸೇರಿ 16 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಇದನ್ನೂ ಓದಿರಿ ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…

ಡ್ರಗ್ಸ್​ ಕೇಸ್​ನ ಆರೋಪಿ ರವಿಶಂಕರ್ 2010ರಲ್ಲಿ ಅರ್ಚನಾ ನಾಯ್ಕ್ ಜೊತೆ ಮದ್ವೆಯಾಗಿದ್ದ. ಇವರಿಗೆ 8 ವರ್ಷದ ಮಗು ಕೂಡ ಇದೆ. ರಾಗಿಣಿ ಜತೆ ಆಪ್ತನಾದ ಬಳಿಕ ರವಿಶಂಕರ್​ನ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ. 2018ರ ನವೆಂಬರ್​ನಲ್ಲಿ ರವಿಶಂಕರ್​ ಮತ್ತು ಅರ್ಚನಾ ನಾಯ್ಕ್​ ದಾಂಪತ್ಯ ಜೀವನದಿಂದ ವಿಚ್ಛೇದನ ಪಡೆದಿದ್ದು, ಪತ್ಯೇಕವಾಗಿ ವಾಸವಾಗಿದ್ದಾರೆ. ಡ್ರಗ್ಸ್​ ಕೇಸ್​ನಲ್ಲಿ ಸದ್ಯ ರವಿಶಂಕರ್​ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.

ಬಾಣಸವಾಡಿಯಲ್ಲಿ 2018ರಲ್ಲಿ ಕೊಕೇನ್‌ ಮಾರಾಟದ ಆರೋಪದಡಿ ಪ್ರತೀಕ್ ಶೆಟ್ಟಿಯನ್ನು ಬಂಧಿಸಲಾಗಿತ್ತು. ಈ‌ ವೇಳೆಯೂ ಪ್ರತೀಕ್ ಶೆಟ್ಟಿ, ರವಿಶಂಕರ್ ಹೆಸರು ಬಾಯಿಬಿಟ್ಟಿದ್ದ. ಬಾಣಸವಾಡಿ ಕೇಸ್ ಆದಾಗ ಅರ್ಚನಾ ನಾಯ್ಕ್ ರವಿಶಂಕರ್​ನ ಜೊತೆಯಲ್ಲಿಯೇ ಇದ್ದರು. ಬಹುಶಃ ಆ ಕೇಸ್ ಸಂಬಂಧ ಹಾಗೂ ರವಿಶಂಕರ್ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಅರ್ಚನಾಗೆ ನೋಟಿಸ್​ ನೀಡಲಾಗಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net