

ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10 ನೇ ತರಗತಿ ಫಲಿತಾಂಶವನ್ನು cbseresults.nic.in ನಲ್ಲಿ ಇಂದು ಮಧ್ಯಾಹ್ನ ಘೋಷಿಸಲಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಆನ್‌ಲೈನ್‌ನಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಈ ಕುರಿತು ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ. 10 ನೇ ತರಗತಿ ಫಲಿತಾಂಶವನ್ನು cbse.nic.in ಮತ್ತು results.nic.in ನಲ್ಲಿ ಪರಿಶೀಲಿಸಬಹುದು.
ಅಧಿಕೃತ ವೆಬ್‌ಸೈಟ್ cbseresults.nic.in ಕಾರ್ಯನಿರ್ವಹಿಸುತ್ತಿಲ್ಲ. ಆನ್‌ಲೈನ್ ಹೊರತಾಗಿ, ಎಸ್‌ಎಂಎಸ್ ಮತ್ತು ಇತರ ಸೇವೆಗಳ ಮೂಲಕವೂ ಫಲಿತಾಂಶ ಲಭ್ಯವಿರುತ್ತದೆ.
ಮೊಬೈಲ್ ಮೂಲಕ ಎಸ್‌ಎಂಎಸ್, ಉಮಾಂಗ್ ಆಪ್, ಐವಿಆರ್ಎಸ್ ಮೂಲಕ ನೇರ ಲಿಂಕ್‌ಗಳು ಮತ್ತು ಮೊಬೈಲ್ ಸಂಖ್ಯೆಗಳೊಂದಿಗೆ ಪರಿಶೀಲಿಸಬಹುದು.
ಇದನ್ನೂ ಓದಿ: ಆಂಡಿಯನ್ ಕಾಂಡೋರ್ ಬಗ್ಗೆ ನಿಮಗೆಷ್ಟು ಗೊತ್ತು?
2019 ರ ಫಲಿತಾಂಶಕ್ಕಿಂತ ಈ ವರ್ಷದ ಶೇಕಡಾವಾರು ಉತ್ತೀರ್ಣ ಪ್ರಮಾಣ ಹೆಚ್ಚಳವಾಗಿದೆ. ಈ ವರ್ಷ ಒಟ್ಟು ಶೇ. 91.46 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2019 ರ ಉತ್ತೀರ್ಣ ಶೇಕಡಾ 91.19 ರಷ್ಟಿತ್ತು.
ಸಿಬಿಎಸ್ಇ 12 ನೇ ತರಗತಿ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 5 ಹೆಚ್ಚಳವಾಗಿದೆ. ಸಿಬಿಎಸ್‌ಇ 10 ನೇ ಪರೀಕ್ಷೆಗೆ ಈ ವರ್ಷ ಒಟ್ಟು 18,85,885 ಅಭ್ಯರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ 18,73,015 ಮಂದಿ ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 17,13,121 ಮಂದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶೇ.99.28 ಉತ್ತೀರ್ಣತೆಯ ಪ್ರಮಾಣದೊಂದಿಗೆ ತಿರುವನಂತಪುರ ಉತ್ತಮ ಸಾಧನೆ ಮಾಡಿದೆ. ಕ್ರಮವಾಗಿ ಚೆನ್ನೈ, ಬೆಂಗಳೂರು, ಪುಣೆ, ಅಜ್ಮೀರ್ ನಂತರ ಸ್ಥಾನದಲ್ಲಿವೆ. ಶೇ.93.14 ಉತ್ತೀರ್ಣತೆಯ ಪ್ರಮಾಣದೊಂದಿಗೆ ವಾಡಿಕೆಯಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಉತ್ತೀರ್ಣರಾದ ಬಾಲಕರ ಪ್ರಮಾಣ ಶೇ.93.31 ರಷ್ಟಿದೆ. ತೃತೀಯ ಲಿಂಗಿಗಳ ಉತ್ತೀರ್ಣತೆ ಪ್ರಮಾಣ ಶೇಕಡಾ 78.95 ಎಂದು ದಾಖಲಾಗಿದೆ.
ಉತ್ತೀರ್ಣತೆ: ಮಾನದಂಡಗಳೇನು?
ಉತ್ತೀರ್ಣರಾಗಲು ವಿದ್ಯಾರ್ಥಿಗಳು ಕನಿಷ್ಠ 33% ಅಂಕಗಳನ್ನು ಗಳಿಸಬೇಕಾಗುತ್ತದೆ. 10 ನೇ ತರಗತಿ ವಿದ್ಯಾರ್ಥಿಗಳಿಗೆ 5 ಅತ್ಯುತ್ತಮ ವಿಷಯಗಳ ನಿಯಮವು ಮಾನ್ಯವಾಗಿರುತ್ತದೆ. ಕನಿಷ್ಠ ಶೇ. 33 ಅಂಕ ಗಳಿಸದ ವಿದ್ಯಾರ್ಥಿಗಳಿಗೆ ವಿಭಾಗ ಅಥವಾ ಅಗತ್ಯ ಮರು ಹಾಜರಿ ಅವಕಾಶ ನೀಡಲಾಗುತ್ತದೆ (ಅಭ್ಯರ್ಥಿ ಅನುತ್ತೀರ್ಣವಾದ ವಿಷಯಗಳ ಸಂಖ್ಯೆಯನ್ನು ಅವಲಂಬಿಸಿ). ಅಂಕಪಟ್ಟಿಯನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಡಿಜಿಲಾಕರ್ ನೋಡಬಹುದು.