ಸಿಬಿಎಸ್​ಇ 10, 12ನೇ ವರ್ಗದ ಪರೀಕ್ಷೆ ದಿನಾಂಕ ನಿಗದಿ

3-68d4268bade26
Published on

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್​ಇ)ಯ 10 ಮತ್ತು 12ನೇ ತರಗತಿಗಳಿಗೆ ಬೋರ್ಡ್ ಎಕ್ಸಾಂ ಮುಂದಿನ ವರ್ಷದ ಫೆ.17ರಂದು ಆರಂಭವಾಗಲಿವೆ ಎಂದು ಬುಧವಾರ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ.

ಪ್ರಮುಖ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸಂಭಾವ್ಯ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಹತ್ತನೇ ತರಗತಿಗೆ ಇದೇ ಮೊದಲ ಸಲ ಶೈಕ್ಷಣಿಕ ಅವಧಿಯಲ್ಲಿ ಎರಡು ಸಲ ಬೋರ್ಡ್ ಎಕ್ಸಾಂ ನಡೆಸಲಾಗುತ್ತಿದೆ. ಮೊದಲ ಆವೃತ್ತಿ 2026ರ ಫೆ.17ರಿಂದ ಮಾ.6ರ ವರೆಗೆ ಮತ್ತು ಎರಡನೇ ಆವೃತ್ತಿ ಮೇ 15ರಿಂದ ಜೂನ್ 1ರ ವರೆಗೆ ನಡೆಯಲಿದೆ ಎಂದು ಸಿಬಿಎಸ್​ಇ ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್ ತಿಳಿಸಿದ್ದಾರೆ. 12ನೇ ತರಗತಿಯ ಬೋರ್ಡ್ ಎಕ್ಸಾಂ ಫೆ.17ರಿಂದ ಏ.9ರ ವರೆಗೆ ನಡೆಯಲಿದೆ. ಪರೀಕ್ಷೆ ನಡೆದ ಅಂದಾಜು 10 ದಿನಗಳ ಬಳಿಕ ಮೌಲ್ಯಮಾಪನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net