ಸಿಬಿಎಸ್​ಇ ಬೋರ್ಡ್ ಎಕ್ಸಾಂ 2020| ಪರೀಕ್ಷೆಗೆ ಕ್ಯಾಲ್ಕುಲೇಟರ್​ ಬಳಸಲು ಮಂಡಳಿ ಅನುಮತಿ- ವಿವರಗಳಿಗೆ ಮುಂದೆ ಓದಿ..

cbse exam 23 JAN 20
Published on

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್​ (ಸಿಬಿಎಸ್​ಇ) ನ ಹತ್ತು ಮತ್ತು 12ನೇ ತರಗತಿಯ ಬೋರ್ಡ್ ಎಕ್ಸಾಂಗೆ ಸಿದ್ಧತೆಗಳು ಶುರುವಾಗಿದೆ. ಇದೇ ವೇಳೆ, ವಿದ್ಯಾರ್ಥಿಗಳಿಗೆ ಶುಭ ಸುದ್ದಿಯೊಂದನ್ನು ಮಂಡಳಿ ನೀಡಿದೆ. ಬೋರ್ಡ್ ಪರೀಕ್ಷೆಗೆ ಕ್ಯಾಲ್ಕುಲೇಟರ್ ಬಳಸುವುದಕ್ಕೆ ಅನುಮತಿ ಇದೆ ಎಂಬ ಸುದ್ದಿ ಪ್ರಕಟವಾಗಿದ್ದು, ಷರತ್ತುಗಳು ಅನ್ವಯ ಎಂಬ ಷರಾ ಕೂಡ ಇದೆ.

ಸಿಬಿಎಸ್​ಇ ಪ್ರಕಟಿಸಿರುವ ನೋಟಿಫಿಕೇಷನ್ ಪ್ರಕಾರ, ಚಿಲ್ಡ್ರನ್ ವಿತ್​ ಸ್ಪೆಷಲ್ ನೀಡ್ಸ್​ (CWSN) ಕೆಟಗರಿಯ ವಿದ್ಯಾರ್ಥಿಗಳಿಗೆ ಮಾತ್ರವೇ ಕ್ಯಾಲ್ಕುಲೇಟರ್ ಬಳಸುವುದಕ್ಕೆ ಅನುಮತಿ ಇದೆ. ಆದರೆ, ಕ್ಯಾಲ್ಕುಲೇಟರ್​ಗಳು ಸಿಂಪಲ್ ಮತ್ತು ಬೇಸಿಕ್ ಮಾದರಿಯದ್ದಾಗಿರಬೇಕು. ಇದನ್ನು ವಿದ್ಯಾರ್ಥಿಗಳು 10ನೇ ತರಗತಿ ಮತ್ತು 12ನೇ ತರಗತಿಯ ಬೋರ್ಡ್​ ಎಕ್ಸಾಂನಲ್ಲಿ ಬಳಸಿಕೊಳ್ಳಬಹುದು.

ಇದಕ್ಕಾಗಿ ಈ ಕೆಟಗರಿಯ ವಿದ್ಯಾರ್ಥಿಗಳು ಮೊದಲೇ ಕ್ಯಾಲ್ಕುಲೇಟರ್ ಬಳಕೆ ಬಗ್ಗೆ ಹೆಸರು ನೋಂದಾಯಿಸಿಕೊಂಡಿರಬೇಕು. ಕ್ಯಾಲ್ಕುಲೇಟರ್ ಬಳಸುವ ವಿದ್ಯಾರ್ಥಿಗಳು ತಮ್ಮ ಶಾಲೆಯ ಮೂಲಕ ಅಧಿಕೃತವಾಗಿ ಮನವಿಯನ್ನು ಮಂಡಳಿಗೆ ಈ ತಿಂಗಳ 28ನೇ ತಾರೀಕಿನ ಒಳಗಾಗಿ ಕಳುಹಿಸಬೇಕು. ಈ ರೀತಿ ಅರ್ಜಿ ಸಲ್ಲಿಸಿ ಸರ್ಟಿಫಿಕೇಟ್ ಪಡೆಯದವರಿಗೆ ಕ್ಯಾಲ್ಕುಲೇಟರ್ ಬಳಕೆ ಅವಕಾಶವಿಲ್ಲ. ಈ ಕೆಟಗರಿಯ ವಿದ್ಯಾರ್ಥಿಗಳಿಗೆ ಮಂಡಳಿ ಅನೇಕ ಸಹಾಯಕ ಅಂಶಗಳನ್ನು ಈಗಾಗಲೇ ಘೋಷಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net