ಸಿಬಿಎಸ್​ಇ ಪರೀಕ್ಷೆಗೆ ಹಾಜರಾಗಲು 75% ಹಾಜರಾತಿ ಕಡ್ಡಾಯ! CBSE Board Exams

CBSE Board Exams
Published on

CBSE Board Exams : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್​ಇ) ನಡೆಸುವ ಮುಂದಿನ ಪರೀಕ್ಷೆಯಲ್ಲಿ ಹಾಜರಾಗಬೇಕಿದ್ದರೆ 10 ಹಾಗೂ 12ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಶೇ.75 ಹಾಜರಾತಿ ಹೊಂದಿರಬೇಕಾದ್ದು ಕಡ್ಡಾಯ ಎಂದು ಸಿಬಿಎಸ್​ಇ ಪುನರುಚ್ಚರಿಸಿದೆ.

2026ರ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವವರು 2025-26ನೇ ಶೈಕ್ಷಣಿಕ ವರ್ಷದಲ್ಲಿ ಶೇ.75 ಹಾಜರಾತಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅದಕ್ಕೂ ಕಡಿಮೆ ಹಾಜರಾತಿ ಹೊಂದಿರುವವರು ದಾಖಲೆಸಹಿತ ಸೂಕ್ತ ಕಾರಣ ನೀಡದ ವಿನಾ ಯಾವುದೇ ವಿನಾಯಿತಿ ಇರುವುದಿಲ್ಲ ಎಂದೂ ಎಚ್ಚರಿಕೆ ನೀಡಿದೆ.

ವೈದ್ಯಕೀಯ ಪ್ರಮಾಣಪತ್ರ, ಮಾನ್ಯತೆ ಪಡೆದ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಆಟೋಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಕ್ಕೆ ಅಧಿಕೃತ ದಾಖಲೆ ಒದಗಿಸಿದ್ದರೆ ಮಾತ್ರ ವಿನಾಯಿತಿ ಇರಲಿದೆ ಎಂಬ ಬಗ್ಗೆಯೂ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net