ಸಿಬಿಎಸ್‌ಇ 10,12 ಪರೀಕ್ಷೆ ಭವಿಷ್ಯ ಸುಪ್ರೀಂನಲ್ಲಿ ನಾಳೆ ನಿರ್ಧಾರ

PUC exam in mizoram
Published on

ನವದೆಹಲಿ: ಕೊರನಾವೈರಸ್ ಬಿಕ್ಕಟ್ಟಿನಿಂದಾಗಿ ಸಿಬಿಎಸ್‌ಇಯ 10 ಮತ್ತು 12 ನೇ ತರಗತಿಗಳ ಉಳಿದ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನಾಳೆ ಸುಪ್ರೀಂಕೋರ್ಟ್‌ ತೀರ್ಪು ಪ್ರಕಟಣೆ ಮಾಡುವ ಸಾಧ್ಯತೆ ಇದೆ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಈ ಕುರಿತು ತನ್ನ ನಿಲುವು ಏನು ಎಂಬ ಬಗ್ಗೆ ಮೊಹರು ಮಾಡಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ಅಭಿಪ್ರಾಯ ಸಲ್ಲಿಸಿದೆ. ಇಂದು ರಾತ್ರಿಯ ವೇಳೆಗೆ ಕೇಂದ್ರ ಸರ್ಕಾರ ಮತ್ತು ಸಿಬಿಎಸ್‌ಇ ಮಂಡಳಿ ಅಧಿಕಾರಿಗಳ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಅವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಸುಪ್ರೀಂಕೋರ್ಟ್‌ ನಾಳೆ ಅಂತಿಮ ತೀರ್ಪು ನೀಡುವ ನಿರೀಕ್ಷೆ ಇದೆ.

ಕರೊನಾವೈರಸ್‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಜುಲೈನಲ್ಲಿ ನಡೆಯಲಿರುವ ಬೋರ್ಡ್ ಪರೀಕ್ಷೆಗಳನ್ನು ಮುಂದೂಡುವಂತೆ ಕೆಲ ಪಾಲಕರು ಕೋರಿದ್ದರೆ, ಈ ಪರೀಕ್ಷೆಗಳನ್ನು ರದ್ದು ಮಾಡುವಂತೆ ಇನ್ನೂ ಕೆಲವರು ಕೋರಿದ್ದಾರೆ. ವಿದ್ಯಾರ್ಥಿಗಳ ಫಲಿತಾಂಶವನ್ನು ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಘೋಷಿಸಬೇಕು ಎಂದೂ ಸಹ ಕೋರಲಾಗಿದೆ. ಇದಲ್ಲದೆ ಏಮ್ಸ್ ಮಾಹಿತಿಯ ಪ್ರಕಾರ ಮುಂಬರುವ ಸಮಯದಲ್ಲಿ ವೈರಸ್ ಭಾರತದಲ್ಲಿ ಉತ್ತುಂಗಕ್ಕೇರಲಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ರದ್ದುಗೊಳಿಸಬೇಕು, ಪರೀಕ್ಷೆಗಳನ್ನು ಪಡೆಯುವುದು ತುಂಬಾ ಅಪಾಯಕಾರಿ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

10 ಮತ್ತು 12ನೇ ತರಗತಿಯ ಒಟ್ಟು 29 ವಿಷಯಗಳ ಪರೀಕ್ಷೆಗಳನ್ನು ನಡೆಯುತ್ತದೆ. ಜುಲೈ 1 ರಿಂದ ಪರೀಕ್ಷೆ ಪ್ರಾರಂಭದ ಬಗ್ಗೆ ಇದಾಗಲೇ ಘೋಷಣೆ ಹೊರಡಿಸಲಾಗಿದೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net