ಸಿಬಿಎಸ್​ಇ, ಐಸಿಎಸ್​ಇ ಪಠ್ಯಕ್ರಮ ಕಡಿತ

CBSE
Published on

ನವದೆಹಲಿ: ಕರೊನಾ ಕಾರಣದಿಂದ ಶೈಕ್ಷಣಿಕ ವರ್ಷದ ಚಟುವಟಿಕೆಯಲ್ಲಿ ವ್ಯತ್ಯಯವಾದ ಕಾರಣ 2020-21ನೇ ಸಾಲಿನ ವಿದ್ಯಾರ್ಥಿಗಳ ಸಹಾಯಕ್ಕೆ ಧಾವಿಸಿರುವ ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್​ಇ) ಮತ್ತು ಭಾರತೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಐಎಸ್​ಸಿಇ) ಕೆಲ ತರಗತಿಗಳ ಪಠ್ಯಕ್ರಮವನ್ನು ತಗ್ಗಿಸಿವೆ. ಸಿಬಿಎಸ್​ಇ 9ರಿಂದ 12ನೇ ತರಗತಿ ಪಠ್ಯಕ್ರಮವನ್ನು ಶೇ. 30ರವರೆಗೆ ಕಡಿತಗೊಳಿಸಲು ತೀರ್ಮಾನಿಸಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ, ಮಾನಸಿಕ, ದೈಹಿಕ ಜ್ಞಾನಾರ್ಜನೆಗೆ ಅಗತ್ಯ ವಾದಷ್ಟು ಪಠ್ಯ ಇಟ್ಟು ಶೈಕ್ಷಣಿಕ ವರ್ಷ ಮುಗಿಸಲಾಗುವುದೆಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಸ್ಪಷ್ಟಪಡಿಸಿದ್ದಾರೆ. ಸಿಐಎಸ್​ಸಿಇ ಕೂಡ ಐಸಿಎಸ್​ಇ ಮತ್ತು ಐಎಸ್​ಸಿಗಳ ಎಲ್ಲ ಪ್ರಮುಖ ವಿಷಯಗಳಲ್ಲಿ ಶೇ. 25 ಪಠ್ಯವನ್ನು ಕಡಿತ ಮಾಡುವುದಾಗಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net