

ನವದೆಹಲಿ: ಯೆಸ್ ಬ್ಯಾಂಕ್ ಪ್ರಕರಣದಲ್ಲಿ ಈಗಾಗಲೇ ಬಂಧಿರಾಗಿರುವ ಬ್ಯಾಂಕ್ ಸಹಸಂಸ್ಥಾಪಕ ರಾಣಾ ಕಪೂರ್ ಮತ್ತು ಅವರ ಪತ್ನಿ ಬಿಂದು, ಅವಂತಾ ರಿಯಾಲ್ಟಿ ಪ್ರವರ್ತಕ ಗೌತಮ್ ಥಾಪರ್ ವಿರುದ್ಧ ಸಿಬಿಐ ಹೊಸದಾಗಿ ಪ್ರಕರಣ ದಾಖಲಿಸಿದೆ.
ಅಮೃತಾ ಶೇರ್ಗಿಲ್ ಬಂಗ್ಲೆ ವ್ಯವಹಾರ ಮತ್ತು ಥಾಪರ್ ಕಂಪನಿಗೆ ನೀಡಲಾದ 1,500 ಕೋಟಿ ರೂಪಾಯಿಗೂ ಹೆಚ್ಚಿನ ಸಾಲ ವಸೂಲಿಯಲ್ಲಿ ರಿಯಾಯಿತಿ ನೀಡುವುದಕ್ಕೆ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಮತ್ತು ಮುಂಬೈನಲ್ಲಿನ ಕಪೂರ್, ಬಿಂದು ಅವರ ಕಚೇರಿ, ನಿವಾಸ, ಬಿಂದು ಮತ್ತು ಥಾಪರ್ಗೆ ಸಂಬಂಧಿಸಿದ ಬ್ಲಿಸ್ ಅಬೋಡ್ನ ಕಚೇರಿ, ಇಂಡಿಯಾ ಬುಲ್ಸ್ ಹೌಸಿಂಗ್ ಕಾರ್ಪೆರೇಷನ್ನ ಕಚೇರಿ ಇನ್ನಿತರಕಡೆ ಸಿಬಿಐ ಅಧಿಕಾರಿಗಳು ಶುಕ್ರವಾರ ಶೋಧ ನಡೆಸಿದ್ದಾರೆ.