

ಗುಜರಾತ್: ಅಹಮದಾಬಾದ್‌ನಲ್ಲಿ 24 ವರ್ಷದ ಮಹಿಳೆಯ ಜತೆ ಕ್ರೂರವಾಗಿ ವರ್ತಿಸಿ ಆಕೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಸೆಪ್ಟೆಂಬರ್ 25 ರಂದು ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಕ್ರೂರವಾಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಕೂದಲು ಹಿಡಿದು ಆಕೆಯನ್ನ ದರದರನೇ ಎಳೆದೊಯ್ದಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವರಲ್ ಆಗುತ್ತಿದ್ದಂತೆಯೇ ಆಕೆಯನ ಎಳೆದೊಯ್ದ ವ್ಯಕ್ತಿ ಗ್ಯಾಲಕ್ಸಿ ಸ್ಪಾ ಮಾಲೀಕ ಮೊಹ್ಸಿನ್ ವಿರುದ್ಧ FIR ದಾಖಲು ಮಾಡಲಾಗಿದೆ. ಈತ ಹಲ್ಲೆ ನಡೆಸಿರೋದು ತನ್ನ ಸ್ಪಾ ಜೊತೆಯಲ್ಲೇ ಪಾರ್ಟ್ನರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅನ್ನೋದು ತಿಳಿದು ಬಂದಿದೆ.
ವ್ಯಾಪಕವಾಗಿ ಹಂಚಿಕೆಯಾದ ವೀಡಿಯೊದಲ್ಲಿ, ಮೊಹ್ಸಿನ್ ಮಹಿಳೆಯ ಮೇಲೆ ಪದೇ ಪದೇ ಹಲ್ಲೆ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಸರಿಸುಮಾರು ನಾಲ್ಕು ನಿಮಿಷಗಳ ವರೆಗೆ ಈ ವ್ಯಕ್ತಿ ಮಹಿಳೆಯನ್ನ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ನಂತರದಲ್ಲಿ ಆಕೆಯ ಬಟ್ಟೆಯನ್ನೂ ಹರಿದು ಹಾಕಿದ್ದಾನೆ. ಇದು ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿದೆ.
ಬೋಡಕ್‌ದೇವ್ ಪೊಲೀಸರು ಸಾಮಾಜಿಕ ಕಾರ್ಯಕರ್ತೆಯೊಬ್ಬರ ಸಹಾಯದಿಂದ ಮಹಿಳೆಯ ಬಳಿಗೆ ತೆರಳಿ ಸಮಾಲೋಚನೆ ನಡೆಸಿದ್ದಾರೆ. ವಿವರಗಳ ಪ್ರಕಾರ, ಘಟನೆ ನಡೆದು ಎರಡು ದಿನಗಳಾದರೂ ಮಹಿಳೆ ಆರೋಪಿ ವಿರುದ್ಧ ದೂರು ದಾಖಲಿಸಿರಲಿಲ್ಲ.
ವಿಚಾರಣೆ ವೇಳೆ ಹಲ್ಲೆಗೊಳಗಾದ ಮಹಿಳೆ ಮೊಹಿನ್ಸ್ ಸ್ಪಾನಲ್ಲಿ ಪಾರ್ಟ್ನರ್ ಅನ್ನೋದು ತಿಳಿದು ಬಂದಿದೆ. ಇಬ್ಬರ ನಡುವಿನ ವಾಗ್ವಾದ ಹಿಂಸಾಚಾರಕ್ಕೆ ತಿರುಗಿದ್ದು, ಸ್ಪಾ ಮಾಲೀಕ ಮೊಹ್ಸಿನ್ ಕೆಯನ್ನು ಥಳಿಸಿ ಕೂದಲಿನಿಂದ ಎಳೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.