ಡ್ರೈನೇಜ್ ಪೈಪ್‌ಗೆ ಸಿಲುಕಿದ ಬೆಕ್ಕು; ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿಯ ಹರಸಾಹಸ | Viral Post

Untitled design - 2024-11-29T193717.191
Published on

ಕೆಲವೊಮ್ಮೆ ನಾವು ಸಾಕಿದ ಪ್ರಾಣಿಗಳಿಂದ ಆಶ್ಚರ್ಯಕರ ಘಟನೆಗಳು ನಡೆಯುತ್ತವೆ. ಅಂತಹದ್ದೇ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ(Viral Post). ಆಟವಾಡುತ್ತಿದ್ದಾಗ ಬೆಕ್ಕೊಂದು ಡ್ರೈನೇಜ್ ಪೈಪ್‌ನಲ್ಲಿ ಸಿಲುಕಿಕೊಂಡಿದೆ. ಅದರ ತಲೆ ಹೊರಗೆ ಬಂದಿದೆ ಆದರೆ ಉಳಿದ ಭಾಗವೆಲ್ಲಾ ಡ್ರೈನೇಜ್ ಪೈಪ್‌ನಲ್ಲಿ ಸಿಲುಕಿಕೊಂಡಿತು. ಬಿಬಿಸಿ ಪ್ರಕಾರ, ಹೆಣ್ಣು ಬೆಕ್ಕು ಕಾರಿನಿಂದ ವಸ್ತುಗಳನ್ನು ಹೊರತೆಗೆಯಲು ಗ್ಯಾರೇಜ್‌ಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

ಬೆಳಗಿನ ಉಪಾಹಾರದ ಸಮಯದಲ್ಲಿ ತನ್ನ ಬೆಕ್ಕು ಕಾಣಿದಿರುವುದನ್ನು ಕಂಡ ಮಾಲೀಕರು ಬೆಕ್ಕಿಗಾಗಿ ಹುಡುಕಾಟ ನಡೆಸಿದ್ದಾರೆ. ಅವರು ಹುಡುಕುತ್ತ ಗ್ಯಾರೇಜ್‌ ಬಳಿಗೆ ಬಂದಾಗ ಬೆಕ್ಕಿನ ತಲೆ ಮಾತ್ರ ಕಂಡಿದೆ. ತಲೆ ಡ್ರೈನೇಜ್ ಪೈಪ್‌ನಿಂದ ಹೊರಗಿದ್ದು ದೇಹವು ಪೈಪ್​ ಒಳಗೆ ಸಿಲುಕಿಕೊಂಡಿದೆ. ತಕ್ಷಣವೇ ಅವರು ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇವೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬೆಕ್ಕನ್ನು ಸುರಕ್ಷಿತವಾಗಿ ಹೊರತರಲು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಅವರು ಮೊದಲು ಒಳಚರಂಡಿ ಪೈಪ್​​​ ಅನ್ನು ಕತ್ತರಿಸಿದರು. ಇದಾದ ನಂತರ ತಂಡವು ಬೆಕ್ಕನ್ನು ವೈದ್ಯರ ಬಳಿಗೆ ಕರೆದೊಯ್ದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ನಿಧಾನವಾಗಿ ಬೆಕ್ಕನ್ನು ಪೈಪ್‌ನಿಂದ ಹೊರತೆಗೆದರು. ಜತೆಗೆ ಬೆಕ್ಕಿನ್ನು ಹೊರತೆಗೆಯುವಾಗ ಅದಕ್ಕೆ ನೋವು ಉಂಟಾಗದಂತೆ ನೋಡಿಕೊಂಡಿದ್ದಾರೆ. ಕ್ಲೆವೆಡಾನ್ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣ ಕಥೆಯನ್ನು ಪೋಟೋ ಜತೆಗೆ ಹಂಚಿಕೊಂಡಿದ್ದಾರೆ.

ಬೆಕ್ಕಿನ ತಲೆ ಪೈಪ್‌ನಿಂದ ಹೊರಬಂದ ಕೆಲವು ಚಿತ್ರಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ. ವೈರಲ್​ ಪೋಸ್ಟ್​​ನಲ್ಲಿ ಒಂದು ಚಿತ್ರದಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೆಕ್ಕನ್ನು ತನ್ನ ಮಡಿಲಲ್ಲಿ ಹಿಡಿದಿರುವುದನ್ನು ನೋಡಬಹುದು.

ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್​​​ ಸಖತ್ ವೈರಲ್ ಆಗುತ್ತಿದೆ. ಇದನ್ನು ಓದಿದ ನಂತರ ಅನೇಕ ಬಳಕೆದಾರರು ಆಘಾತಕ್ಕೊಳಗಾಗಿದ್ದಾರೆ. ಪ್ರಾಣಿಪ್ರಿಯರು ಅಗ್ನಿಶಾಮಕ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net