

ನವದೆಹಲಿ: ಪ್ರಾಣಿಪಕ್ಷಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಕೆಲವೊಮ್ಮೆ ಈ ವಿಡಿಯೋಗಳನ್ನು ನೋಡಿದ ಮೇಲೆ ನಮಗೆ ನಗು ತಡೆಯಲು ಆಗುವುದಿಲ್ಲ, ಮತ್ತೆ ಕೆಲವೊಮ್ಮೆ ಇವು ನಮ್ಮನ್ನು ಭಾವುಕರನ್ನಾಗಿಸುತ್ತವೆ. ಇನ್ನು ನಾವು ಬೆಕ್ಕುಗಳ ಬಗ್ಗೆ ಮಾತನಾಡುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಬೆಕ್ಕುಗಳ ವಿಡಿಯೋಗಳು ಮುನ್ನೆಲೆಗೆ ಬರುತ್ತಿರುತ್ತವೆ. ಅವುಗಳಲ್ಲಿ ಒಂದಕ್ಕಿಂತ ಒಂದು ಹೊಸ ವಿಡಿಯೋಗಳು ಜನರನ್ನು ಬೆರಗುಗೊಳಿಸುತ್ತವೆ.
ಇತ್ತೀಚಿನ ದಿನಗಳಲ್ಲಿ ಬೆಕ್ಕಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿರುತ್ತವೆ. ಇದೀಗ ವಿಡಿಯೋದಲ್ಲಿ ಬೆಕ್ಕು ಒಬ್ಬ ವ್ಯಕ್ತಿ ಜತೆ ಹೇಗೆ ವ್ಯಾಯಾಮ ಮಾಡುತ್ತಿದೆ ಎಂಬುದನ್ನು ನೋಡಬಹುದು. ಆರಂಭದಲ್ಲಿ, ಈ ಬೆಕ್ಕು ಮನುಷ್ಯನ ತಲೆಯನ್ನು ಹಿಡಿದುಕೊಂಡು ನೆಲದ ಮೇಲೆ ಪುಷ್-ಅಪ್ ಮಾಡುವುದನ್ನು ಕಾಣಬಹುದು. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ 'ಬೂಟೆಂಗಿಬಿಡನ್' ಹೆಸರಿನ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ. ಆ ನಂತರ ಇದು ಹೆಚ್ಚು ವೈರಲ್ ಆಗಲು ಪ್ರಾರಂಭಿಸಿತು.
ಇಲ್ಲಿಯ ತನಕ ಈ ವಿಡಿಯೋವನ್ನು 3.5 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 57.8 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಇದರೊಂದಿಗೆ 19 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋ ರೀಟ್ವೀಟ್ ಮಾಡಿದ್ದಾರೆ. ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರೂ ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ.
ಬಹುತೇಕರು ಸಾಮಾಜಿಕ ಮಾಧ್ಯಮ ಬಳಕೆದಾರರ ವಿಡಿಯೋ ಕುರಿತು "'ವಾವ್! ಎಂತಹ ಅದ್ಭುತವಾದ ದಾರಿ.' 'ತುಂಬಾ ಮುದ್ದಾದ ವಿಡಿಯೋ', 'ನನಗೂ ಇಂತಹ ಜಿಮ್ ಟ್ರೈನರ್ ಬೇಕು' ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.