ರಾಜಕೀಯಕ್ಕಾಗಿ ಜಾತಿಗಣತಿ ಕೈಗೆತ್ತಿಕೊಂಡಿಲ್ಲ

mlc Naseer Ahmed
ನಜೀರ್ ಅಹಮದ್
Published on

ಕೋಲಾರ: ರಾಜಕೀಯಕ್ಕಾಗಿ ಜಾತಿಗಣತಿ ಕೈಗೆತ್ತಿಕೊಳ್ಳುತ್ತಿಲ್ಲ. ಇದು ರಾಜ್ಯದ ಜನತೆಯ ಉದ್ದೇಶ ಈಡೇರಿಸಲು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗು ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ೪ ವರ್ಷ ಅಽಕಾರದಲ್ಲಿದ್ದ ಬಿಜೆಪಿಯವರು ಯಾಕೆ ಮಾಡಲಿಲ್ಲ, ಅವರಿಗೆ ಭಯವಿತ್ತೆ ಎಂದು ಪ್ರಶ್ನಿಸಿದರು.
ಈ ಮೊದಲು ೧೩೬ ಕೋಟಿ ರೂ. ಖರ್ಚಾಗಿದೆ ಎಲ್ಲ ಕಡೆ ಮನೆಮನೆಗೆ ಹೋಗಿ ಸಮೀಕ್ಷೆ ನಡೆಸಲಾಗಿದೆ. ರಾಜ್ಯದ ಜನಸಂಖೆ್ಯ 7 ಕೋಟಿಯಿದೆ, ಅದರಲ್ಲಿ ಒಬ್ಬರು ಇಬ್ಬರು ತಪ್ಪಿದರೆ ಏನು ಮಾಡಲಾಗುತ್ತದೆ. ಈ ವಿಚಾರವಾಗಿ ಅ.12ರಂದು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಮುಂದಿನ ನಿರ್ಣಯವನ್ನು ಸಿಎಂ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಸಿಎಂ ಬದಲಾವಣೆಯ ವಿಚಾರವಾಗಿ ಹರಿದಾಡುತ್ತಿರುವ ಊಹಾಪೋಹಗಳನ್ನು ಯಾರೂ ನಂಬಬೇಡಿ. ಜತೆಗೆ ಜನರನ್ನು ತಪ್ಪು ದಾರಿಗೆ ತರುವುದು ಬೇಡ. 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಸತೀಶ್ ಜಾರಕಿಹೊಳಿ ಉತ್ತಮ ನಾಯಕರು, ಎಐಸಿಸಿ ನಾಯಕರನ್ನು ಭೇಟಿ ಮಾಡುವುದು ತಪ್ಪಾ? ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ದೊಡ್ಡ ಕಾರ್ಯಕ್ರಮವೊಂದು ನಡೆಯಲಿದ್ದು, ಇದರ ಬಗ್ಗೆ ಚರ್ಚಿಸಿರಬಹುದು ಎಂದರು.
ಜಮ್ಮುವಿನಲ್ಲಿ ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ಗೆ ಸ್ಥಾನಗಳು ಲಭಿಸಿವೆ. ಆದರೆ ಹರಿಯಾಣದಲ್ಲಿ ಗುಂಪುಗಾರಿಕೆಯಿಂದಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಸಮೀಕ್ಷೆಯ ವರದಿಯಲ್ಲಿತ್ತು, ಈಗ ಸಾಕಷ್ಟು ವ್ಯತ್ಯಾಸವಾಗಿದೆ ಎಂದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 400ಕ್ಕೂ ಅಧಿಕ ಸ್ಥಾನ ಬರುತ್ತದೆ ಎಂದು ಹೇಳುತ್ತಿದ್ದರು. ಚುನಾವಣೆಯಲ್ಲಿ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.
ಚುನಾವಣೆಯು ಸ್ಥಳೀಯ ಮುಖಂಡತ್ವದ ಮೇಲೆಯೂ ನಿರ್ಧಾರವಾಗುತ್ತದೆ. ರಾಜ್ಯದಲ್ಲಿ ಪಕ್ಷ ಒಗ್ಗಟ್ಟಾಗಿದ್ದರಿಂದಾಗಿ 136 ಸ್ಥಾನ ಗೆಲ್ಲಲು ಸಾಧ್ಯವಾಯಿತು. ಆದರೆ, ಹರಿಯಾಣದಲ್ಲಿ ಮೂರು ಗುಂಪುಗಳಿAದಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net