ಜಾತಿ ಗಣತಿ ವರದಿ; ಸಭೆಯಲ್ಲಿ ಸಚಿವರ ತೀವ್ರ ವಿರೋಧ!: ಜಾರಿ ಬಗ್ಗೆ ಸದ್ಯಕ್ಕಿಲ್ಲ ನಿರ್ಧಾರ | Caste Census Report

dk-2025-04-17t190723114-6801041c01fdf
Published on

Caste Census Report: 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರಿತ ಜಾತಿ ಗಣತಿ (Caste Census) ವರದಿ ಜಾರಿ ವಿಚಾರದಲ್ಲಿ  ಸದ್ಯಕ್ಕೆ ಸಾಕಷ್ಟು ಚರ್ಚೆಯಾಗುತ್ತಿದ್ದು, ತಾರ್ಕಿಕ ಅಂತ್ಯ ಕಾಣದಾಗಿದೆ.

ಇದೀಗ ವಿಧಾನಸೌಧದಲ್ಲಿ ಗುರುವಾರ(ಏ.17) ನಡೆದ ಮಹತ್ವದ ಸಂಪುಟಸಭೆಯಲ್ಲಿ  ಜಾತಿಗಣತಿ ವರದಿ ಜಾರಿಗೆ ಸಚಿವರ ತೀವ್ರ ಪ್ರತಿರೋಧ ಹಿನ್ನೆಲೆ, ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಕೊಳ್ಳಬಹುದು ಎಂದು ಹೇಳಲಾಗಿದೆ.

ಸಭೆಯಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಸಚಿವರು ಜಾರಿ ಬಗ್ಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು,  2 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬಾರದೆ ಸಭೆ ವಿಫಲವಾಗಿದೆ.

ಅಲ್ಲದೆ, ಎಲ್ಲರ ಅಭಿಪ್ರಾಯಗಳನ್ನು ಬರವಣಿಗೆ(ಲಿಖಿತ) ರೂಪದಲ್ಲಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಸಚಿವರಿಗೆ ಸಲಹೆ ನೀಡಿದ್ದಾರೆ. ಜಾತಿ ಜನಗಣತಿ ವರದಿ ಸೋರಿಕೆಯಲ್ಲ. ಅಧಿಕೃತ ವರದಿಯಲ್ಲಿರುವ ದತ್ತಾಂಶಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಮೆ.2ರಂದು ವಿಶೇಷ ಕ್ಯಾಬಿನೆಟ್​ ಸಭೆ ನಡೆಯಲಿದೆ ಎಂದು ಬಳಿಕ ಎಚ್​​.ಕೆ.ಪಾಟೀಲ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net