ಜಾತಿ ಗಣತಿ ವೈಜ್ಞಾನಿಕವಾಗಿಯೇ ಇದೆ: ಕಾಂತರಾಜು

kanta
Published on

ಬೆಂಗಳೂರು: ಜಾತಿಗಣತಿ ವೈಜ್ಞಾನಿಕವಾಗಿ ಆಗಿಲ್ಲ ಎನ್ನುವುದು ತಪ್ಪು. ಸರ್ವೋಚ್ಚ ನ್ಯಾಯಾಲಯದ ಎಲ್ಲ ವಿಧಿವಿಧಾನ ಅನುಸರಿಸಿ ಸಮಿಕ್ಷೆ ನಡೆಸಿದ್ದೇವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿ ಬಿಡುಗಡೆ ಒಳ್ಳೆಯ ಕೆಲಸ. ಸಮಾಜದ ಏರುಪೇರು ಸರಿಪಡಿಸಲು ಮಾಡಿರುವ ಒಳ್ಳೆಯ ಕೆಲ ಅದು. 1931ರ ನಂತರ ಇಂತಹ ಪ್ರಯತ್ನ ನಡೆದಿರಲಿಲ್ಲ. ಜಾತಿಯನ್ನೂ ಒಂದು ಅಂಶವನ್ನಾಗಿ ಈ ಸಮಿಕ್ಷೆ ನಡೆಸಲಾಗಿದೆ. ಇದನ್ನು ಬಳಸಿಕೊಂಡು ಕಾರ್ಯರೂಪಕ್ಕೆ ತರಬೇಕು ಎಂದರು.

ವರದಿ ಜಾರಿಯಾದರೆ ಅನುಕೂಲ

ಸಮೀಕ್ಷೆ ಕೇವಲ ಹಿಂದುಳಿದ ವರ್ಗದ್ದು ಮಾತ್ರವಲ್ಲ. ಇಡೀ ರಾಜ್ಯದಲ್ಲಿ ಪ್ರತಿ ಮನೆಗೆ ಮನೆಗೆ ಹೋಗಿ ನಡೆಸಿದ ಸಮಿಕ್ಷೆ ಮಾಡಲಾಗಿದೆ. ಈ ವರದಿ ಜಾರಿಯಾದರೆ ಬಹಳ ಜನರಿಗೆ ಅನುಕೂಲವಾಗಲಿದೆ. ಜಾತಿಗಣತಿ ಅವೈಜ್ಞಾನಿಕ ಎಂಬ ಆರೋಪ ವಿಚಾರ ಜಾತಿ ಗಣತಿ ವರದಿ ವೈಜ್ಞಾನಿಕವಾಗಿ ಆಗ್ಲಿ ಎನ್ನುವುದು ತಪ್ಪು. ಇಂದಿರಾ ಸಹಾನಿ ಮಂಡಲ್ ಕೇಸ್ ಈಗಲೂ ಜಾರಿಯಲ್ಲಿದೆ. ಅದನ್ನ ಅನುಸರಿಸಿ ಮಾಡಿದ ವರದಿ ಇದಾಗಿದೆ. ವೈಜ್ಞಾನಿಕವಾಗಿಯೇ ಮಾಡಲಾಗಿದೆ ಎಂದು ಪುನರುಚ್ಛರಿಸಿದರು.

ವರದಿ ಬಳಸಿಕೊಳ್ಳುವ ವಿಶ್ವಾಸ

ಸರ್ಕಾರ ತಮ್ಮ ವರದಿಯನ್ನು ಬಳಸಿಕೊಳ್ಳುತ್ತದೆ. ಯಾವತ್ತ್ತಾದರೂ ಈ ವರದಿಯನ್ನು ಬಳಸಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಜಾತಿಜನಗಣತಿ ವರದಿ ಸಿದ್ದರಾಮಯ್ಯ ನವರ ಅಭಿಲಾಷೆ ಆಗಿತ್ತು. ಅದನ್ನು ಕಾರ್ಯರೂಪಕ್ಕೆ ತರುವ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಬೇಕು. ಬಹುತೇಕ ಜನ ವೈಜ್ಞಾನಿಕವಾಗಿಲ್ಲ ಎಂದು ಪ್ರಾರಂಭದಲ್ಲೂ ಹೇಳಿದ್ದರು. ಸಭೆ, ಸಮಾರಂಭಗಳಲ್ಲಿಯೂ ಆ ಮಾತು ಕೇಳುತ್ತಿದೆ.

ತುಳಿತಕ್ಕೆ ಒಳಗಾಗಿರುವವರೆಗೆ ಕಾರ್ಯಕ್ರಮಗಳನ್ನು ಕೊಡಬೇಕು. ಹೀಗಾಗಿ ವರದಿ ಅವಶ್ಯಕ ಎಂದು ಕಾಂತರಾಜು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net