ಪ.ಜಾತಿ, ಪಂಗಡದವರು ಒಂದೆ ದೋಣಿಯ ಪ್ರಯಾಣಿಕರು

D.26 MDG 1P1
ಮೂಡಿಗೆರೆಯಲ್ಲಿ ಗಿರಿಜ್ಯೋತಿ ಗಿರಿಜನ ಸಂಘದಿಂದ ನಡೆದ ವಿಶ್ವ ಆದಿವಾಸಿಗಳ ದಿನಾಚರಣೆ ಕಾರ್ಯಕ್ರಮವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು.
Published on

ಮೂಡಿಗೆರೆ: ಪ.ಜಾತಿ ಮತ್ತು ಪಂಗಡದವರು ಒಂದೆ ದೋಣಿಯಲ್ಲಿ ಸಾಗುತ್ತಿರುವ ಪಂಗಡಗಳು ಉಭಯ ಸಮುದಾಯದ ಆಚಾರ ವಿಚಾರ, ಭಾಷೆ, ಜೀವನಶೈಲಿ ಇವೆಲ್ಲವೂ ವಿಭಿನ್ನವಾಗಿದ್ದರೂ ಅನಾದಿಕಾಲದಿಂದಲೂ ಮೂಲ ಸೌಲಭ್ಯಕ್ಕಾಗಿ ಹೋರಾಟ ನಡೆಸಿ ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ತಾಲೂಕು ಗಿರಿಜ್ಯೋತಿ ಗಿರಿಜನರ ಸಂಘದಿಂದ ಶನಿವಾರ ಪಟ್ಟಣದ ಲ್ಯಾಂಪ್ಸ್ ಸಹಕಾರ ಸಂಘದ ಭವನದಲ್ಲಿ ನಡೆದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ಆದಿವಾಸಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಈಗಿನ ಆಧುನಿಕತೆಗೆ ತಕ್ಕಂತಹ ಶಿಕ್ಷಣವನ್ನು ಪಡೆಯಲು ಮುಂದಾಗಬೇಕು. ವಿಜ್ಞಾನ ತಂತ್ರಜ್ಞಾನ ಸಹಿತ ವಿವಿಧ ವಿಭಾಗದಲ್ಲಿ ಆದಿವಾಸಿ ಬುಡಕಟ್ಟು ವರ್ಗದವರು ಮುಂಚೂಣಿಯಲ್ಲಿರಬೇಕು. ಮೂಲ ಸೌಲಭ್ಯ ಪಡೆಯಬೇಕಾದರೆ ಸರ್ಕಾರದ ವಿವಿಧ ಕಚೇರಿಗಳಿಗೆ ಫಲಾನುಭವಿಗಳು ಅರ್ಜಿ ಸಲ್ಲಿಸಿದರೆ ಅವರ ಬೇಡಿಕೆ ಸರ್ಕಾರದ ಗಮನಕ್ಕೆ ಬರುತ್ತದೆ. ಕಳಸ ತಾಲೂಕಿನ ಸಂಸೆ ಸಮೀಪದ ಆದಿವಾಸಿ ಹಾಡಿಗೆ ರಸ್ತೆ ಇಲ್ಲದೆ ರೋಗಿಗಳನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸುವ ಪರಿಸ್ಥಿತಿ ಇದೆ. ಅಲ್ಲಿನ ಹಾಡಿಯ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡ ನಾನು ಸ್ಥಳಕ್ಕೆ ತೆರಳಿ ಅಲ್ಲಿನ ನಿವಾಸಿಗಳೊಂದಿಗೆ ಚರ್ಚೆ ನಡೆಸಿದಾಗ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ಗ್ರಾಪಂ ಅಥವಾ ಇತರೆ ಸರ್ಕಾರಿ ಕಚೇರಿಗಾಗಲಿ ಹಿಂದಿನಿಂದಲೂ ಅರ್ಜಿ ಸಲ್ಲಿಸಿರಲಿಲ್ಲ. ಕೂಡಲೇ ಅಲ್ಲಿಗೆ ರಸ್ತೆ ನಿರ್ಮಾಣಕ್ಕೆ ಯೋಜನೆ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಗಿರಿಜ್ಯೋತಿ ಗಿರಿಜನ ಸಂಘದ ತಾಲೂಕು ಅಧ್ಯಕ್ಷ ವಿಜಯೇಂದ್ರ, ರಾಜೇಶ್, ಸುಂದರ್ ಕುಮಾರ್, ಎಚ್.ಪಿ.ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net