ಚಿತ್ರದುರ್ಗ: 31.06 ಲಕ್ಷ ರೂ.ನಗದು,8.16 ಲಕ್ಷ ಮೌಲ್ಯದ ಮದ್ಯ ವಶ

chitradurga
Published on

ಚಿತ್ರದುರ್ಗ: ನೀತಿ ಸಂಹಿತೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ತಡೆಗೆ ತೀವ್ರ ನಿಗಾ ವಹಿಸಲಾಗಿದ್ದು,ಈವರೆಗೆ ಜಿಲ್ಲೆಯಲ್ಲಿ ದಾಖಲೆ ರಹಿತ 31.06 ಲಕ್ಷ ರೂ.ನಗದು,7.86 ಲಕ್ಷ ರೂ.ಮೌಲ್ಯದ 1956.22 ಲೀಟರ್ ಅಕ್ರಮ ಮದ್ಯ ಹಾಗೂ 30,500 ರೂ.ಅಂದಾಜು ಮೌಲ್ಯದ 1.267 ಕೆಜಿ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ತಿಳಿಸಿದ್ದಾರೆ.

ಮೊಳಕಾಲ್ಮೂರು ತಾಲೂಕಿನಲ್ಲಿ 11,02,700,ಹಿರಿಯೂರು-17,84,000 ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ 2,20,000 ರೂ.ಸೇರಿ 31,06,700 ನಗದು ವಶ ಪಡಿಸಿಕೊಳ್ಳಲಾಗಿದೆ.
ಹಿರಿಯೂರು ತಾಲೂಕು ಗುಯಿಲಾಳು ಚೆಕ್‌ಪೋಸ್ಟ್,ಪಿ.ಡಿ.ಕೋಟೆ ಚೆಕ್‌ಪೋಸ್ಟ್ ಸೇರಿ ವಿವಿಧೆಡೆ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ,ವಾಹನಗಳ ತಪಾಸಣೆ ಕಾರ‌್ಯವನ್ನು ಡಿಸಿ ಪರಿಶೀಲಿಸಿದರು.

ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆಯೂ ನಿಗಾ ವಹಿಸ ಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರುವಂತಿಲ್ಲ ಎಂದು ತಾಕೀತು ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಇದ್ದರು.

Chitradurga, alcohol,,,ಚಿತ್ರದುರ್ಗ,ಮದ್ಯ,

ಚಿತ್ರದುರ್ಗ,ಮದ್ಯ, ,,,,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net