

ವಕೀಲರ ಅಲಭ್ಯತೆಯ ಕಾರಣ ದೇಶದ ಕೆಳಹಂತದ ನ್ಯಾಯಾಲಯಗಳಲ್ಲಿ 63 ಲಕ್ಷ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಇದರಲ್ಲಿ ಶೇ. 78 ಕೇಸ್ಗಳು ಕ್ರಿಮಿನಲ್ ಮತ್ತು ಶೇ. 22 ಸಿವಿಲ್ ಪ್ರಕರಣಗಳಾಗಿವೆ ಎಂದು ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ (ಎನ್ಜೆಡಿಜಿ) ಹೇಳಿದೆ. ನೇಮಿಸಿಕೊಂಡಿದ್ದ ಲಾಯರ್ಗಳ ಮರಣ, ವಕೀಲರ ಶುಲ್ಕ ಭರಿಸಲಾಗದ ಸ್ಥಿತಿ, ಪ್ರಾಸಿಕ್ಯೂಷನ್ನಿಂದ ವಕೀಲರ ನೇಮಕದಲ್ಲಿ ಆಗಿರುವ ವಿಳಂಬ, ಉಚಿತ ನ್ಯಾಯಾಂಗ ಸೇವೆಯಲ್ಲಿನ ಅದಕ್ಷತೆ ವಕೀಲರ ಅಲಭ್ಯತೆಗೆ ಕಾರಣವಾಗಿವೆ. ಇದರೊಟ್ಟಿಗೆ ನ್ಯಾಯಾಧೀಶರ ಕೊರತೆ ಮತ್ತು ವಿಚಾರಣೆ ಮುಂದೂಡಿಕೆಯಿಂದಲೂ ಪ್ರಕರಣಗಳ ವಿಲೇವಾರಿ ವಿಳಂಬ ಆಗುತ್ತಿದೆ.