

Vijay Deverakonda : ಬುಡಕಟ್ಟು ಜನರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಟಾಲಿವುಡ್ ನಟ ವಿಜಯ್ ದೇವರಕೊಂಡ ವಿರುದ್ಧ ಹೈದರಾಬಾದ್ನ ಎಸ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ.
ಸೂರ್ಯ ಅಭಿನಯದ ರೆಟ್ರೋ ಚಿತ್ರ ಪ್ರೀ ಇವೆಂಟ್ ವೇಳೆ ವಿಜಯ್ ಮಾಡಿದ ಹೇಳಿಕೆಗಳಿಗಾಗಿ ಹೈದರಾಬಾದ್ ಮೂಲದ ವಕೀಲ ಲಾಲ್ ಚೌಹಾಣ್ ಅವರು ವಿಜಯ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತೆಲಂಗಾಣ ಟುಡೇ ವರದಿ ತಿಳಿಸಿದೆ.
ಪ್ರೀಇವೆಂಟ್ ವೇದಿಕೆ ಕಾರ್ಯಕ್ರಮದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡುತ್ತಿದ್ದಾಗ ನಟ ವಿಜಯ್, '' ಈ ದಾಳಿಗಳು ನೂರಾರು ವರ್ಷಗಳ ಹಿಂದಿನ ಬುಡಕಟ್ಟು ಸಮುದಾಯಗಳ ನಡುವಿನ ಘರ್ಷಣೆಗಳಿಗೆ ಹೊಲುತ್ತದೆ'' ಎಂದು ಹೇಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಸಿದ್ದಾರೆ.
ಇದನ್ನೂ ಓದಿ:ಜಗನ್ನಾಥ ದೇವಸ್ಥಾನಕ್ಕೆ 5 ಲಕ್ಷ ರೂ. ಮೌಲ್ಯದ ಪೊರಕೆ ದಾನ ಮಾಡಿದ ಸಿಎಂ ಮಮತಾ: ಇದರ ವಿಶೇಷತೆ ಹೀಗಿದೆ.. | Digha ಬುಡಕಟ್ಟು ಸಂಘಗಳು ಕೂಡ ಅವರ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಖಂಡಿಸಿವೆ ಎಂದು ವರದಿಯಾಗಿದೆ. ವಿಜಯ್ ಅವರ ಹೇಳಿಕೆಗಳು ತಮ್ಮನ್ನು ಅವಮಾನಿಸಿವೆ ಎಂದು ಅವರು ಆರೋಪಿಸಿದ್ದು, ತಕ್ಷಣ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ಈ ಕುರಿತು ''ದೂರಿನ ಕುರಿತು ಕಾನೂನು ಅಭಿಪ್ರಾಯ ಪಡೆದ ನಂತರ ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು' ಎಂದು ಪೊಲೀಸರು ಪ್ರಕಟಣೆಗೆ ತಿಳಿಸಿದ್ದಾರೆ.
"ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡುವ ಅಗತ್ಯವಿಲ್ಲ ಏಕೆಂದರೆ ಪಾಕಿಸ್ತಾನಿಗಳು ಸ್ವತಃ ತಮ್ಮ ಸರ್ಕಾರದಿಂದ ಬೇಸತ್ತಿದ್ದಾರೆ ಮತ್ತು ಇದು ಮುಂದುವರಿದರೆ ಅವರ ಮೇಲೆ ದಾಳಿ ಮಾಡುತ್ತಾರೆ. ನಿಜವಾಗಲೂ 500 ವರ್ಷಗಳ ಹಿಂದೆ ಬುಡಕಟ್ಟು ಜನಾಂಗದವರು ಹೊಡೆದಾಡಿಕೊಳ್ಳುತ್ತಿದ್ದರು. ಇವರು ಬುದ್ಧಿ ಇಲ್ಲದೆ, ಕನಿಷ್ಠ ಸಾಮಾನ್ಯ ಜ್ಞಾನವಿಲ್ಲದೆ ಮಾಡುವ ಕೆಲಸಗಳು'' ಎಂದು ಹೇಳಿದ್ದಾರೆ.(ಏಜೆನ್ಸೀಸ್)