ಹನುಮಂತನ ಬದಲು ರಿಷಬ್ ಶೆಟ್ಟಿ ಮುಖ! ಸಿನಿಮಾದಲ್ಲಿ ದೇವರ ವಿರೂಪ ಆರೋಪ..  Case filed against Rishab Shetty

Jai Hanuman
Published on

Case filed against Rishab Shetty:  'ಜೈ ಹನುಮಾನ್' ಚಿತ್ರದಲ್ಲಿ ಹನುಮಂತನ ಪಾತ್ರ ನಿರ್ವಹಿಸಿದ್ದ ರಿಷಭ್ ಶೆಟ್ಟಿ ಅವರ ಮುಖವನ್ನು ಮನುಷ್ಯನಂತೆ ತೋರಿಸಲಾಗಿದೆ ಎಂದು ದೂರು ದಾಖಲಾಗಿದೆ. ಈ ಮೂಲಕವಾಗಿ ಕನ್ನಡದ ಸ್ಟಾರ್​ ನಟ ರಿಷಬ್​ ಶೆಟ್ಟಿ ಸಿನಿಮಾಗೆ ಸಂಕಷ್ಟ ಎದುರಾಗಿದೆ.

ರಿಷಬ್ ಶೆಟ್ಟಿ ‘ಜೈ ಹನುಮಾನ್’ನಲ್ಲಿ ಹನುಮಂತನ ಪಾತ್ರ ಮಾಡ್ತಾರೆ ಅಂತ ಅಧಿಕೃತವಾಗಿ ಘೋಷಿಸಿದ್ರು. ಈ ಬಗ್ಗೆ ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ರು. ಆದ್ರೆ ಈಗ ಆ ಫಸ್ಟ್ ಲುಕ್ ಮೇಲೆ ಕೇಸ್ ಹಾಕಿದ್ದಾರೆ.

ಹೈಕೋರ್ಟ್ ವಕೀಲ ಮಾಮಿದಲ್ ತಿರುಮಲ್ ರಾವ್ ಅವರು ನಿರ್ಮಾಪಕರು ಮತ್ತು ರಿಷಭ್ ಶೆಟ್ಟಿ ವಿರುದ್ಧ ಈ ದೂರು ದಾಖಲಿಸಿದ್ದಾರೆ. ಚಿತ್ರದಲ್ಲಿ ಹನುಮಂತನ ಮುಖವನ್ನು ಮನುಷ್ಯನಂತೆ ತೋರಿಸಲಾಗಿದೆ ಎಂಬುದು ಅವರ ದೂರು.

ರಾಮನ ವಿಗ್ರಹ ಹಿಡಿದು ಕೂತಿರೋ ರಿಷಬ್ ಶೆಟ್ಟಿ ಫೋಟೋ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಆದ್ರೆ ಅದೇ ಸಮಯದಲ್ಲಿ ‘ಮೈತ್ರಿ ಮೂವೀ ಮೇಕರ್ಸ್’ನ ನವೀನ್ ಎರ್ನೇನಿ, ಯಲಮಂಚಿಲಿ ರವಿಶಂಕರ್, ರಿಷಬ್ ಶೆಟ್ಟಿ, ನಿರ್ದೇಶಕ ಪ್ರಶಾಂತ್ ವರ್ಮ ಮೇಲೆ ನಾಂಪಲ್ಲಿ ಕ್ರಿಮಿನಲ್ ಕೋರ್ಟ್‌ನಲ್ಲಿ ಕೇಸ್ ದಾಖಲಾಗಿದೆ. ನ್ಯಾಯವಾದಿ ಮಮಿಡಾಳ ತಿರುಮಲ ರಾವ್ ಕೇಸ್ ಹಾಕಿದ್ದಾರೆ. ಜೈ ಹನುಮಾನ್ ಬಿಡುಗಡೆಗೂ ಮುನ್ನವೇ ಕಾನೂನು ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ನಿರ್ಮಾಣ ಸಂಸ್ಥೆ ಮತ್ತು ಚಿತ್ರದ ನಟನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

'ಪುಷ್ಪ 2' ಚಿತ್ರದ ಪ್ರೀಮಿಯರ್ ಪ್ರದರ್ಶನದ ಸಮಯದಲ್ಲಿ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಘಟನೆಯಿಂದ ಮೈತ್ರಿ ಮೂವಿ ಮೇಕರ್ಸ್‌ನ ರವಿಶಂಕರ್ ಮತ್ತು ನವೀನ್ ಎರ್ನೇನಿ ಸ್ವಲ್ಪ ನಿರಾಳರಾಗಿದ್ದರು. ಈಗ ಅವರ ಮುಂಬರುವ ಚಿತ್ರ 'ಜೈ ಹನುಮಾನ್' ಬಗ್ಗೆ ಗದ್ದಲ ಆರಂಭವಾಗಿದೆ.

ಮುಂದಿನ ಪೀಳಿಗೆಗೆ ಹನುಮಂತ ಯಾರು ಅಂತ ಗೊತ್ತಾಗೋದಿಲ್ಲ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರ’ ಅಂತ ಕೇಸ್ ಹಾಕಿದ್ದಾರೆ. ಈ ವಿಷಯ ಈಗ ವೈರಲ್ ಆಗಿದೆ. ಈ ಕೇಸ್ ಬಗ್ಗೆ ‘ಮೈತ್ರಿ’, ಪ್ರಶಾಂತ್ ವರ್ಮ, ರಿಷಬ್ ಶೆಟ್ಟಿ ಏನು ಹೇಳ್ತಾರೆ ಅನ್ನೋದು  ಕಾದು ನೋಡಬೇಕಾಗಿದೆ.  ಈ ಸಿನಿಮಾ ದೃಶ್ಯದಿಂದ  ಹಿಂದೂ ಧರ್ಮಕ್ಕೆ ಧಕ್ಕೆ ತಂದಿದ್ದಾರೆ ಎನ್ನುವುದು ಇವರ ವಾದವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net