

ನವದೆಹಲಿ: ತಪಾಸಣೆ ಹಾಗೂ ಕ್ವಾರಂಟೈನ್ ವಿಧಿಸಲು ಆಸ್ಪತ್ರೆಗೆ ಕರೆತಂದಾಗ ವಿಕೃತಿ ಮೆರೆದಿದ್ದ ತಬ್ಲಿಘಿಗಳ ವಿರುದ್ಧ ಕಾನೂನು ಕ್ರಮಕ್ಕೆ ದೆಹಲಿ ಪೊಲಿಸರು ಮುಂದಾಗಿದ್ದಾರೆ.
ನಿಜಾಮುದ್ದೀನ್ ಮರ್ಕಜ್ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದವರನ್ನು ಕರೊನಾ ಸೋಂಕಿನ ತಪಾಸಣೆ ಹಾಗೂ ಕ್ವಾರಂಟೈನ್ ವಿಧಿಸಲು ಇಲ್ಲಿನ ಲೋಕನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಗೆ ಕರೆತರಲಾಗಿತ್ತು. ಆಗ ಕೆಲ ತಬ್ಲಿಘಿಗಳು ವಿಕೃತಿ ಮೆರೆದಿದ್ದರು. ವಾರ್ಡ್ನಲ್ಲಿ ಉಗಿದಿದ್ದಲ್ಲದೇ, ಕ್ವಾರಂಟೈನ್ ವಿಧಿಸಲಾಗಿದ್ದ ರೂಮ್ ಎದುರು ಮಲ ವಿಸರ್ಜನೆ ಮಾಡಿದ್ದರು.
ಈ ಎರಡು ಪ್ರಕರಣಗಳಲ್ಲಿ ಸೋಂಕು ವ್ಯಾಪಿಸಿದ ಆರೋಪದಲ್ಲಿ ಎರಡು ಮಿನಲ್ ಕೇಸ್ಗಳನ್ನು ದಾಖಲು ಮಾಡಲಾಗಿದೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೆಹಲಿಯ ನರೇಲಾ ಕ್ವಾರಂಟೈನ್ ಕೇಂದ್ರದ ಕೊಠಡಿಯ ಎದುರು ಮಲ ವಿಸರ್ಜಿಸಿದ ಆರೋಪದಲ್ಲಿ ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯ ನಿವಾಸಿಗಳಾದ ಇಬ್ಬರು ಜಮಾತ್ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಎಲ್ಎನ್ ಜೆಪಿ ಆಸ್ಪತ್ರೆಯ ವಾರ್ಡ್ನಲ್ಲಿ ಉಗುಳಿದ ಆರೋಪದಲ್ಲಿ ಕೆಲವರ ವಿರುದ್ಧ ಕೇಸ್ ಮಾಡಲಾಗಿದೆ. ತಾವಿದ್ದ ಮೂರನೇ ಮಹಡಿಯಿಂದ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯತ್ತ ಉಗಿಯುತ್ತಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಸಾಂಕ್ರಾಮಿಕ ಕಾಯಿಲೆ ತಡೆ ಕಾಯ್ದೆ ಹಾಗೂ ಭಾರತೀಯ ಸಂಹಿತೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ದೇಶದಲ್ಲಿ ಈವರೆಗೆ ವರದಿಯಾಗಿರುವ ಸೋಂಕಿತ ಪ್ರಕರಣಗಳಲ್ಲಿ ಶೇ.30ಕ್ಕೂ ಅಧಿಕ ಪ್ರಕರಣಗಳು ತಬ್ಲಿಘಿ ಜಮಾತ್ನೊಂದಿಗೆ ನಂಟು ಹೊಂವೆ ಹಾಗೂ 17ಕ್ಕೂ ಅಧಿಕ ರಾಜ್ಯಗಳಿಗೆ ಜಮಾತ್ ಸದಸ್ಯರಿಂದಲೇ ಸೋಂಕು ಹರಡಿದೆ. (ಏಜೆನ್ಸೀಸ್)