More

    ಹೃದ್ಯ ವಿಡಿಯೋಕ್ಕೆ ನೆಟ್ಟಿಗರು ಫಿದಾ: COVID19 ಸೋಂಕಿನಿಂದ ಪಾರಾದ 4 ತಿಂಗಳ ಶಿಶುವನ್ನು ವೆಂಟಿಲೇಟರ್​ನಿಂದ ಹೊರ ತೆಗೆದ ಸಂದರ್ಭವದು..!

    ಮ್ಯಾಡ್ರಿಡ್​ : ಕರೊನಾ COVID19 ವೈರಸ್ ಸೋಂಕು ಜಗತ್ತನ್ನು ಕಾಡುತ್ತಿರುವ ವೇಳೆ ಬಹುತೇಕ ಎಲ್ಲರೂ ಒಗ್ಗಟ್ಟಾಗಿ ಅದರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ಸಂಕಷ್ಟದ ನಡುವೆ ಅಲ್ಲಲ್ಲಿ ಕೆಲವು ಹೃದಯಸ್ಪರ್ಶಿ ಘಟನೆಗಳು, ಅನುಭವಗಳು ಅನೇಕರಿಗೆ ಆಗುತ್ತದೆ. ಅಂಥದ್ದೇ ಒಂದು ಅನುಭವ ಇದು. ಇದೊಂದು ರೀತಿಯಲ್ಲಿ ಪ್ರೇರಣೆಯೂ ಹೌದು..

    ಸ್ಪೇನ್​ನ ಮಲಗಾದಲ್ಲಿನ ರೀಜಿನಲ್ ಹಾಸ್ಪಿಟಲ್​ನಲ್ಲಿ ನಡೆದ ಘಟನೆ ಇದು. ಕರೊನಾ ಸೋಂಕು ತಗುಲಿದ ನಾಲ್ಕು ತಿಂಗಳ ಪಾಪು ಈ ಘಟನೆಯ ಕೇಂದ್ರ ಬಿಂದು. ಈ ಗಂಡು ಮಗು ಮಾರ್ಬೆಲ್ಲಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಸೋಂಕು ತೀವ್ರಗೊಂಡ ಕಾರಣ ಮಲಗಾದಲ್ಲಿನ ರೀಜನಲ್ ಹಾಸ್ಪಿಟಲ್​ಗೆ ಮಗುವನ್ನು ಮಾರ್ಚ್ 16ರಂದು ಸ್ಥಳಾಂತರಿಸಲಾಗಿತ್ತು. ಮಗು ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಕಾರಣ ವೆಂಟಿಲೇಟರ್ ಸಪೋರ್ಟ್ ಒದಗಿಸಲಾಗಿತ್ತು. ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡ ಬಳಿಕ ವೆಂಟಿಲೇಟರ್​ ಅನ್ನು ತೆಗೆಯುತ್ತಿದ್ದ ಸಂದರ್ಭದಲ್ಲಿ ಆ ಹಾಸ್ಪಿಟಲ್​ನ ಎಲ್ಲ ವೈದ್ಯ ಸಿಬ್ಬಂದಿ ಐಸಿಯು ಹೊರಗೆ ನಿಂತು ಚಿಯರ್​ ಅಪ್ ಮಾಡಿದ್ದರು.

    ಚರ್ಚೆಗೀಡಾಯಿತು ಸಿಂಧನೂರಿನ ವಲಸೆ ಕಾರ್ಮಿಕ ಮಹಿಳೆಯ ಸಾವು: ಅನ್ನಾಹಾರವಿಲ್ಲದೇ ನಡೆದು ನಡೆದೇ ನಿತ್ರಾಣವಾಗಿ ತೀರ್ಕೊಂಡ್ರಾ ಅಥವಾ ಚಿಕಿತ್ಸೆ ಸಿಗದೆ ಮೃತಪಟ್ರಾ?

    ಆ ಸಂದರ್ಭದ ವಿಡಿಯೋ ಕ್ಲಿಪ್​ ಒಂದು ಇದೀಗ ವೈರಲ್ ಆಗಿದೆ. ಈ ಕುರಿತು ಹಾಸ್ಪಿಟಲ್​ನ ಐಸಿಯು ಘಟಕದ ಮುಖ್ಯಸ್ಥ ಜೋಸ್​ ಕಮಚೋ ಪ್ರತಿಕ್ರಿಯಿಸಿದ್ದು, ಮಗು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದೆ. ಇನ್ನು ಆ ಮಗುವಿನ ವೆಂಟಿಲೇಟರ್ ಸಪೋರ್ಟ್​ನ ಅಗತ್ಯವಿಲ್ಲ. ಶೀಘ್ರವೇ ನಾರ್ಮಲ್ ವಾರ್ಡ್​ಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.

    ಇತ್ತೀಚಿನ ಮಾಹಿತಿ ಪ್ರಕಾರ, ಸ್ಪೇನ್​ನ ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿಯಲ್ಲಿ 1,31,646 ಕರೊನಾ ಕೇಸ್​ಗಳು ದಾಖಲಾಗಿವೆ. 12,641 ಸಾವು ಸಂಭವಿಸಿದ್ದರೆ, 38,050 ಜನ ಸೋಂಕು ಮುಕ್ತರಾಗಿದ್ದಾರೆ. ಕಳೆದ ತಿಂಗಳಷ್ಟೇ ಶಿಶುಗಳು ಮತ್ತು ಮಕ್ಕಳು ಕೂಡ ಈ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರು. ಹೀಗಾಗಿ ಈ ಮಗುವಿನ ಬಗ್ಗೆ ಮಲಗಾದ ಹಾಸ್ಪಿಟಲ್​ ಸಿಬ್ಬಂದಿ ಹೆಚ್ಚಿನ ಮುತುವರ್ಜಿ ವಹಿಸಿದ್ದರು. (ಏಜೆನ್ಸೀಸ್)

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts