More

    ಚರ್ಚೆಗೀಡಾಯಿತು ಸಿಂಧನೂರಿನ ವಲಸೆ ಕಾರ್ಮಿಕ ಮಹಿಳೆಯ ಸಾವು: ಅನ್ನಾಹಾರವಿಲ್ಲದೇ ನಡೆದು ನಡೆದೇ ನಿತ್ರಾಣವಾಗಿ ತೀರ್ಕೊಂಡ್ರಾ ಅಥವಾ ಚಿಕಿತ್ಸೆ ಸಿಗದೆ ಮೃತಪಟ್ರಾ?

    ಸಿಂಧನೂರು/ಬಳ್ಳಾರಿ: ಬೆಂಗಳೂರಿಗೆ ಗುಳೆ ಹೋಗಿದ್ದ ಸಿಂಧನೂರಿನ ಮಹಿಳೆ ಗಂಗಮ್ಮ ಸಾವು ಚರ್ಚೆಗೆ ಗ್ರಾಸವಾಗಿದೆ. ಲಾಕ್ ಡೌನ್ ದಿಂದಾಗಿ ಊರಿಗೆ ಹಿಂದಿರುಗುತ್ತಿದ್ದ ಗಂಗಮ್ಮಗೆ ಸರಿಯಾಗಿ ಊಟ ಹಾಗೂ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಿಂಧನೂರಿನ ವೆಂಕಟರಾವ್ ಕಾಲನಿ ನಿವಾಸಿ ಗಂಗಮ್ಮ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಹೋಗಿದ್ದು ಕಟ್ಟಡ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ಘೋಷಣೆ ಬಳಿಕ ಕಟ್ಟಡದ ಮಾಲೀಕರು ಗಂಗಮ್ಮಗೆ ಕೂಲಿ ಹಣ ನೀಡಿರಲಿಲ್ಲ ಎಂದು ಹೇಳಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣ ಆಗಿತ್ತು. ಈ ಹಿನ್ನೆಲೆಯಲ್ಲಿ ಮಾ.31ರಂದು ಗುಳೆ ಹೋಗಿದ್ದ ಕುಟುಂಬಗಳ ಸುಮಾರು 50 ಜನರು ಟ್ರ್ಯಾಕ್ಟರ್ ಬಾಡಿಗೆ ಪಡೆದು ಬೆಂಗಳೂರಿನಿಂದ ಊರಿಗೆ ಹೊರಟಿದ್ದರು. ಬಳ್ಳಾರಿ ಜಿಲ್ಲೆ ಪ್ರವೇಶ ವೇಳೆ ಅಧಿಕಾರಿಗಳು ಟ್ರಾಕ್ಟರ್ ನಲ್ಲಿದ್ದವರನ್ನು ವಶಕ್ಕೆ ಪಡೆದು ನಗರದ ತಾತ್ಕಾಲಿಕ ನಿರಾಶ್ರಿತರ ಕೇಂದ್ರದಲ್ಲಿ ಇರಿಸಿದ್ದರು. ಮಾ.3ರಂದು ಅನಾರೋಗ್ಯ ಹಿನ್ನೆಲೆಯಲ್ಲಿ ಗಂಗಮ್ಮ ಅವರನ್ನು ನಗರದ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಗಂಗಮ್ಮ ಅವರ ಪ್ಲೇಟ್ ಲೆಟ್​ ಸಂಖ್ಯೆ 9 ಸಾವಿರಕ್ಕೆ ಕುಸಿದಿತ್ತು ಎಂದು ಹೇಳಲಾಗಿದೆ. ವಿಮ್ಸ್ ಆಸ್ಪತ್ರೆಯಲ್ಲಿ ಏ.5ರಂದು ಗಂಗಮ್ಮ ಮೃತಪಟ್ಟಿದ್ದಾರೆ.

    ನನ್ನ ಹೆಂಡತಿಯನ್ನು ಊರಿಗೆ ಕಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ನಂತರ ಆಕೆಯನ್ನು ವಿಮ್ಸ್‌ಗೆ ದಾಖಲಿಸಿದ್ದರೂ ಸರಿಯಾಗಿ ಚಿಕಿತ್ಸೆ ದೊರೆಯಲಿಲ್ಲ.
    |ಮಲ್ಲಿಕಾರ್ಜುನ, ಗಂಗಮ್ಮ ಪತಿ

    ಗಂಗಮ್ಮ ತುಂಬಾ ನಿತ್ರಾಣರಾಗಿದ್ದರು. ಕಿಡ್ನಿ ಹಾಗೂ ಚರ್ಮ ಸಂಬಂಧಿ ಸಮಸ್ಯೆಗಳಿದ್ದವು. ಪ್ಲೇಟ್ ಲೆಟ್ಸ್ ಸಂಖ್ಯೆ ತುಂಬಾ ಕಡಿಮೆಯಾಗಿತ್ತು. ಪ್ಲೇಟ್ ಲೆಟ್ಸ್ ಹೆಚ್ಚಳ ಜತೆಗೆ ಅಗತ್ಯ ಎಲ್ಲ ಚಿಕಿತ್ಸೆ ನೀಡಲಾಗಿದೆ. ಜಿಲ್ಲಾಧಿಕಾರಿ ಅವರೇ ಖುದ್ದು ಕಾಳಜಿ ವಹಿಸಿ ಆಸ್ಪತ್ರೆಗೆ ಕಳುಹಿಸುವುದರ ಜತೆಗೆ ಗಂಗಮ್ಮ ಅವರಿಗೆ ಎಲ್ಲ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದ್ದರು.
    |ಡಾ.ಮರಿರಾಜ, ವಿಮ್ಸ್ ಅಧೀಕ್ಷಕ

    ನಗರದ ತಾತ್ಕಾಲಿಕ ನಿರಾಶ್ರಿತರ ಕೇಂದ್ರದಲ್ಲಿ ಗಂಗಮ್ಮ ಅವರಿಗೆ ಊಟ ಹಾಗೂ ಹಣ್ಣುಗಳನ್ನು ನೀಡಲಾಗಿದೆ. ಅನಾರೋಗ್ಯ ಕಾರಣಕ್ಕೆ ಏ.2ರಂದು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎಲ್ಲ ಅಗತ್ಯ ಚಿಕಿತ್ಸೆ ಬಳಿಕವೂ ಆರೋಗ್ಯ ಸುಧಾರಿಸದೆ ಗಂಗಮ್ಮ ಮೃತಪಟ್ಟಿದ್ದಾರೆ.
    |ಎಸ್.ಎಸ್.ನಕುಲ್, ಬಳ್ಳಾರಿ ಜಿಲ್ಲಾಧಿಕಾರಿ

    ರಾಜ್ಯದಲ್ಲಿ ಇಂದಿನಿಂದ ಕರೊನಾ ದಿಗ್ಬಂಧನ ಮತ್ತಷ್ಟು ಬಿಗಿ: ಜನರು ಹಸಿವಿನಿಂದ ಬಳಲಲು ಬಿಡಲ್ಲ | ಬಿಎಸ್​ವೈ ಅಭಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts