ಎಂಪಿ ಪುತ್ರ ರಂಗನಾಥ್ ವಿರುದ್ಧದ ಪ್ರಕರಣ: ಮೈಸೂರಿಗೆ ವರ್ಗಾವಣೆ ಮಾಡಲು ಮುಂದಾದ ಪೊಲೀಸರು

Crime Logo
Published on

ಬೆಂಗಳೂರು: ಬಳ್ಳಾರಿ ಸಂಸದ ದೇವೇಂದ್ರಪ್ಪರ ಪುತ್ರ ರಂಗನಾಥ್ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮಹಿಳೆಗೆ ವಂಚಿಸಿದ ಪ್ರಕರಣವನ್ನು ಮೈಸೂರಿನ ಪೊಲೀಸ್ ಠಾಣೆಗೆ ವರ್ಗಾಯಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.


ಬೆಂಗಳೂರಿನ ವಿಜಯನಗರದ ನಿವಾಸಿ ೨೫ ವರ್ಷದ ಸಂತ್ರಸ್ತೆ ರಂಗನಾಥ್ ವಿರುದ್ಧ ದೂರು ನೀಡಿದ್ದು, ಉಪನ್ಯಾಸಕನಾಗಿರುವ ರಂಗನಾಥ್ ಜತೆ ಆಕೆಗೆ ಮೈಸೂರಿನಲ್ಲಿ ಒಡನಾಟವಿದುದ್ದು. ಬೆಂಗಳೂರಿನಲ್ಲಿ ಈ ಸಂಬಂಧ ಯಾವುದೇ ದಾಖಲೆಗಳಿಲ್ಲ. ಹಾಗಾಗಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಈ ಪ್ರಕರಣವನ್ನು ಮೈಸೂರಿಗೆ ವರ್ಗಾವಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ.


ರಂಗನಾಥ್ ಆಕೆಯ ಸ್ನೇಹ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿ ಮೈಸೂರಿಗೆ ಕರೆಸಿಕೊಂಡು ಅಲ್ಲಿನ ಹೊಟೇಲ್ಗೆ ಕರೆದೊಯ್ದು ಲೈಂಗಿಕ ಸಂಪರ್ಕ ಹೊಂದಿ ನಂತರ ಆಕೆಗೆ ವಂಚಿಸಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಸಂಬಂಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದ್ದು, ಪ್ರಾಥಮಿಕ ತನಿಖೆ ಕೈಗೊಂಡಿರುವ ಪೊಲೀಸರು, ಈ ಪ್ರಕರಣವನ್ನು ಇದೀಗ ಮೈಸೂರು ನಗರ ಪೊಲೀಸರಿಗೆ ವರ್ಗಾಯಿಸಲು ಸಿದ್ಧತೆ ನಡೆಸಿದ್ದಾರೆ.


ಈ ನಡುವೆ ಯುವತಿಯು ಫೋಟೋ, ಆಡಿಯೋ ಇಟ್ಟುಕೊಂಡು ೧೫ ಲಕ್ಷ ರೂ.ಕೊಡುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆಂದು ಆಕೆ ವಿರುದ್ಧ ರಂಗನಾಥ್ ಕೂಡ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net