VIDEO | ಸಿಎಂ ಜಗನ್‌ ಪೋಸ್ಟರ್‌ ಕಿತ್ತು ತೆಗೆದ ನಾಯಿ ವಿರುದ್ಧ ದೂರು ದಾಖಲು!

Case Against Dog For Removing Andhra CM Jagan Mohan Reddy's poster
Published on

ಆಂಧ್ರಪ್ರದೇಶ: ನಾಯಿಯೊಂದು ಮನೆಯೊಂದಕ್ಕೆ ಅಂಟಿಸಿದ್ದ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಪೋಸ್ಟರ್​ನ್ನು ತೆಗೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಿಳೆಯೊಬ್ಬರು ನಾಯಿ ವಿರುದ್ಧವಾಗಿ ದೂರು ದಾಖಲಿಸಿದ್ದಾರೆ.

ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಆಂಧ್ರಪ್ರದೇಶ ತುಂಬ ʼನಮ್ಮ ನಂಬಿಕೆ ನೀವೇ ಜಗನ್ʼ ಎಂಬ ಹೆಸರಿನ ಸ್ಟಿಕ್ಕರ್‌ಗಳನ್ನು ಮನೆ ಮನೆಗೆ ಅಂಟಿಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಕ್ಷೇತ್ರ ಉಸ್ತುವಾರಿಗಳು ಭಾಗವಹಿಸುತ್ತಿದ್ದು, ಮನೆಮನೆಗೆ ಸ್ಟಿಕ್ಕರ್ ಅಂಟಿಸಲು ಯತ್ನಿಸುತ್ತಿದ್ದಾರೆ. ಇದರ ನಡುವೆ ನಾಯಿಯೊಂದು ಮನೆಯೊಂದಕ್ಕೆ ಅಂಟಿಸಿದ್ದ ಜಗನ್‌ ಸ್ಟಿಕ್ಕರ್ ತೆಗೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಆಂಧ್ರದ ಪೊಲೀಸ್ ಠಾಣೆಯಲ್ಲಿ ನಾಯಿಯ ವಿರುದ್ಧ ವೈಎಸ್‌ಆರ್‌ ಕಾಂಗ್ರೆಸ್‌ಗೆ ಸೇರಿದ ಮಹಿಳೆಯರು ದೂರು ದಾಖಲಿಸಿರುವುದಾಗಿ ತಿಳಿದು ಬಂದಿದೆ. ನಾಯಿಯೊಂದು ಜಗನ್ ಮೋಹನ್ ರೆಡ್ಡಿ ಅವರಿರುವ ಸ್ಟಿಕ್ಕರ್‌ನ್ನು ತನ್ನ ಕಾಲುಗಳಿಂದ ಕಿತ್ತುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಸದ್ಯ ವಿಜಯವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಯಿಯ ವಿರುದ್ಧ ದೂರು ದಾಖಲಾಗಿದೆ. ದೂರುದಾರರು, ಕೂಡಲೇ ನಾಯಿಯನ್ನು ವಶಕ್ಕೆ ತೆಗೆದುಕೊಂಡು ನಾಯಿಯ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net