ಕೈ ತಪ್ಪಿದ ಬಿಜೆಪಿ ಟಿಕೆಟ್; ಬೆಟ್ಟಸ್ವಾಮಿಗೆ ಲಘು ಹೃದಯಾಘಾತ

Gubbi Constituency
Published on

ತುಮಕೂರು: ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಬೆಟ್ಟಸ್ವಾಮಿಗೆ ಲಘು ಹೃದಯಾಘಾತವಾಗಿದೆ.

ಬಿಜೆಪಿ ನಿನ್ನೆ ರಾತ್ರಿ‌ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ದಿಲೀಪ್ ಕುಮಾರ್ ಗೆ ಟಿಕೆಟ್ ಘೋಷಣೆಯಾಗಿದ್ದನ್ನು ಕೇಳಿ ಎದೆನೋವು ಕಾಣಿಸಿಕೊಂಡಿದೆ. ಬೆಟ್ಟಸ್ವಾಮಿ ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದರು.

ರಾತ್ರಿ ಸರಿಸುಮಾರು 11.30ರ ಸಮಯದಲ್ಲಿ ಬೆಟ್ಟಸ್ವಾಮಿಗೆ ಲಘು ಹೃದಯಾಘಾತವಾಗಿದ್ದು, ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗ್ಗೆ ಆಸ್ಪತ್ರೆಯಿಂದ ಬೆಟ್ಟಸ್ವಾಮಿ ಡಿಸ್‌ಚಾರ್ಜ್ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net